ಕರ್ನಾಟಕ

karnataka

ETV Bharat / sports

ಮಿಂಚಿದ ಕನ್ನಡಿಗರು: ವಿಂಡೀಸ್​ ವಿರುದ್ಧ ಟೆಸ್ಟ್​ ಸರಣಿ ಗೆದ್ದ ಭಾರತ ಎ ತಂಡ - India A beat West Indies A by 7 wickets

ಏಕದಿನ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿರುವ ಭಾರತ ಎ ತಂಡಕ್ಕೆ ಟೆಸ್ಟ್​ ಸರಣಿಯನ್ನು ಇನ್ನೂ ಒಂದು ಪಂದ್ಯ ಉಳಿದಿರುವಂತೆ 2-0ಯಲ್ಲಿ ಜಯ ಸಾಧಿಸಿದೆ.

India A

By

Published : Aug 4, 2019, 4:48 PM IST

ಟ್ರೆನಿಟಾಡ್​: ಕರ್ನಾಟಕದ ಆಟಗಾರರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ಎ ತಂಡ ವಿಂಡೀಸ್​ ಎ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್​ ಇನ್ನಿಂಗ್ಸ್​ನಲ್ಲಿ ವಿಂಡೀಸ್​ 318 ರನ್ ​ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 190 ರನ್​ಗಳಿಗೆ ಆಲೌಟ್​ ಆಗುವ ಮೂಲಕ 128 ರನ್​ಗಳ ಇನ್ನಿಂಗ್ಸ್​ ಹಿನ್ನೆಡೆ ಅನುಭವಿಸಿತು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಕರಾರುವಾಕ್​ ಬೌಲಿಂಗ್​ ದಾಳಿ ನಡೆಸಿದ ಕನ್ನಡಿಗ ಕೆ. ಗೌತಮ್​ ಕೇವಲ 17 ರನ್​ ನೀಡಿ ಪ್ರಮುಖ 5 ವಿಕೆಟ್​ ಪಡೆದು ಮಿಂಚಿದರು. ಇವರಿಗೆ ಸಾಥ್​ ನೀಡಿದ ಸಂದೀಪ್​ ವಾರಿಯರ್​ 3 ವಿಕೆಟ್​ ಪಡೆದು ವಿಂಡೀಸ್​ ತಂಡವನ್ನು 149 ರನ್​ಗಳಿಗೆ ಆಲೌಟ್​ ಆಗುವಂತೆ ನೋಡಿಕೊಂಡರು.

278 ರನ್​ಗಳ ಗುರಿ ಬೆನ್ನತ್ತಿರುವ ಭಾರತ ತಂಡ 3 ವಿಕೆಟ್ ಕಳೆದುಕೊಂಡು 7 ವಿಕೆಟ್​ಗಳ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್​ ಅಗರ್​ವಾಲ್​ 134 ಎಸೆತಗಳಲ್ಲಿ 10 ಬೌಂಡರಿ ಸಮೇತ 81 ರನ್​ ಗಳಿಸಿ ಔಟ್​ ಆದ್ರು. ಮತ್ತೋರ್ವ ಆರಂಭಿಕ ಬ್ಯಾಟ್ಸ್​ಮನ್​ ಪ್ರಿಯಾಂಕ್​ ಪಾಂಚಾಲ್​ 68 ರನ್ ​ಗಳಿಸಿದರು. ನಾಯಕ ಹನುಮ ವಿಹಾರಿ 1 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ 4 ನೇ ವಿಕೆಟ್​ ಜೊತೆಯಾಟದಲ್ಲಿ ಅಭಿಮನ್ಯು ಈಶ್ವರನ್​(62 ರನ್)​, ಅನ್ಮೋಲ್​ಪ್ರೀತ್​ ಸಿಂಗ್​(51 ರನ್) 101 ರನ್​ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಏಕದಿನ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದ್ದ ಭಾರತ ತಂಡ ಟೆಸ್ಟ್​ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ 2-0ಯಲ್ಲಿ ವಶಪಡಿಸಿಕೊಂಡಿದೆ.

ABOUT THE AUTHOR

...view details