ಲಕ್ನೋ: ದಕ್ಷಿಣ ಆಫ್ರಿಕಾ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 9 ವಿಕೆಟ್ಗಳಿಂದ ಗೆದ್ದು ಸರಣಿ ಸೋಲಿನ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪಾಯಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 112 ರನ್ಗಳಿಸಿತು. ಸುನೆ ಲೂಸ್ 28 ರನ್ ಮತ್ತು ಲಾರಾ ಗೂಡಲ್ 25 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು
ಭಾರತದ ಪರ ರಾಜೇಶ್ವರಿ ಗಾಯಕ್ವಾಡ 4 ಓವರ್ಗಳಲ್ಲಿ 9ರನ್ ನೀಡಿ 3 ವಿಕೆಟ್ ಪಡೆದರು. ರಾಧ ಯಾದವ್ , ಅರುಂಧತಿ ರೆಡ್ಡಿ, ದೀಪ್ತಿ ಶರ್ಮಾ, ಸಿಮ್ರಾನ್ ಬಹದೂರ್ ತಲಾ ಒಂದು ವಿಕೆಟ್ ಪಡೆದು ಹರಿಣ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ನೆರವಾದರು.
113 ರನ್ಗಳ ಗುರಿ ಪಡೆದ ಭಾರತೀಯ ಪಡೆ 11 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿ 9 ವಿಕೆಟ್ಗಳ ಜಯ ಸಾಧಿಸಿತು. ಶೆಫಾಲಿ ವರ್ಮಾ 30 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 60 ರನ್ಗಳಿಸಿದರೆ, ಮಂಧಾನ 28 ಎಸೆತಗಳಲ್ಲಿ 9 ಬೌಂಡರಿ ಸಹಿತ 48 ರನ್ಗಳಿಸಿ ಗೆಲುವಿನ ಗಡಿ ದಾಟಿಸಿದರು.
ಆದರೆ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರಿಂದ ಟಿ20 ಸರಣಿಯನ್ನ 2-1ರಲ್ಲಿ ದಕ್ಷಿಣ ಆಫ್ರಿಕಾ ತಂಡ ವಶಪಡಿಸಿಕೊಂಡಿತು.