ಕರ್ನಾಟಕ

karnataka

ETV Bharat / sports

ಭಾರತಕ್ಕೆ ಮಾಡು-ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್​ ಗೆದ್ದ ಬೌಲಿಂಗ್​ ಆಯ್ದುಕೊಂಡ ವಿಂಡೀಸ್!... ದುಬೆ ಬದಲು ಟಾಕೂರ್​ ಕಣಕ್ಕೆ - ಭಾರತ ವೆಸ್ಟ್​ ಇಂಡೀಸ್​ 2ನೇ ಏಕದಿನ ಪಂದ್ಯ

ಕಳೆದ ಪಂದ್ಯದಲ್ಲಿ 287 ರನ್​ಗಳಿಸಿಯೂ ಕಳಪೆ ಬೌಲಿಂಗ್​ ಪ್ರದರ್ಶನ ತೋರಿ ಸೋಲುಕಂಡಿದ್ದರಿಂದ ಕೊಹ್ಲಿ ಆಲ್​ರೌಂಡರ್​ ಶಿವಂ ದುಬೆಯನ್ನು ಹೊರಗಿಟ್ಟು ವೇಗಿ ಶಾರ್ದುಲ್​ ಟಾಕೂರ್​ಗೆ ಅವಕಾಶ ನೀಡಿದ್ದಾರೆ.

West indies won the toss elected to bowl first
West indies won the toss elected to bowl first

By

Published : Dec 18, 2019, 1:20 PM IST

ವಿಶಾಖಪಟ್ಟಣ: ಸರಣಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೊಹ್ಲಿ ಬಳಗಕ್ಕೆ ಎರಡನೇ ಪಂದ್ಯದಲ್ಲೂ ಟಾಸ್​ನಲ್ಲಿ ಹಿನ್ನಡೆಯಾಗಿದೆ. ಟಾಸ್​ ಗೆದ್ದ ಪೊಲಾರ್ಡ್​ ಇಂದೂ ಕೂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದ ಪಂದ್ಯದಲ್ಲಿ 287 ರನ್​ಗಳಿಸಿಯೂ ಕಳಪೆ ಬೌಲಿಂಗ್​ ಪ್ರದರ್ಶನ ತೋರಿ ಸೋಲುಕಂಡಿದ್ದರಿಂದ ಕೊಹ್ಲಿ ಆಲ್​ರೌಂಡರ್​ ಶಿವಂ ದುಬೆಯನ್ನು ಹೊರಗಿಟ್ಟು ವೇಗಿ ಶಾರ್ದುಲ್​ ಟಾಕೂರ್​ಗೆ ಅವಕಾಶ ನೀಡಿದ್ದಾರೆ.

ವಿಂಡೀಸ್​ ತಂಡ ಕೂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ಎವಿನ್​ ಲೆವಿಸ್​ ಹಾಗೂ ಸ್ಪಿನ್ನರ್​ ಖಾರಿ ಪೀರೆ ತಂಡ ಸೇರಿಕೊಂಡಿದ್ದು ಆಂಬ್ರಿಸ್​ ಹಾಗೂ ವಾಲ್ಶ್ ಹೊರಗುಳಿದಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್​ ಶರ್ಮಾ(ಉ.ನಾ) ಕೆ.ಎಲ್.​ ರಾಹುಲ್​, ಶ್ರೇಯಸ್​ ಅಯ್ಯರ್​, ರಿಷಭ್​ ಪಂತ್​, ಕೆದಾರ್​ ಜಾದವ್​,ರವೀಂದ್ರ ಜಡೇಜಾ, ಕುಲ್ದೀಪ್​ ಚಹಲ್​, ದೀಪಕ್​ ಚಹಾರ್​, ಮೊಹಮ್ಮದ್​ ಶಮಿ, ಶಾರ್ದುಲ್​ ಟಾಕೂರ್​

ವೆಸ್ಟ್​ ಇಂಡೀಸ್​: ಶಾಯ್​ ಹೋಪ್​, ಇವೆನ್​ ಲೆವಿಸ್​​, ಶಿಮ್ರಾನ್ ಹೆಟ್ಮಯರ್,ರಾಸ್ಟನ್​ ಚೇಸ್​, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್(ನಾಯಕ)​, ಜೇಸನ್ ಹೋಲ್ಡರ್, ಖಾರಿ ಪೆರ್ರಿ, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಪ್​, ಕೀಮೋ ಪಾಲ್

For All Latest Updates

ABOUT THE AUTHOR

...view details