ಕಟಕ್: ಭಾರತದ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಶಾಯ್ ಹೋಪ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 3000 ರನ್ಗಳಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಪ್ರಸ್ತುತ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಶಾಯ್ ಹೋಪ್ ಕೇವಲ 67 ಇನ್ನಿಂಗ್ಸ್ಗಳಲ್ಲಿ 3000 ರನ್ ಪೂರೈಸುವ ಮೂಲಕ ಪಾಕಿಸ್ತಾನದ ಬಾಬರ್ ಅಜಂ(68)ರನ್ನು ಇಂದಿಕ್ಕಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.
ಹೋಪ್ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ 102,ಎರಡನೇ ಪಂದ್ಯದಲ್ಲಿ 78 ಹಾಗೂ ಮೂರನೇ ಪಂದ್ಯದಲ್ಲಿ 42 ರನ್ಗಳಿಸಿದ್ದರು.
ದಕ್ಷಿಣ ಆಫ್ರಿಕಾದ ಹಾಸಿಂ ಆಮ್ಲ 57 ಇನ್ನಿಂಗ್ಸ್ಗಳಲ್ಲಿ 3000 ರನ್ ಗಳಿಸಿರುವುದು ವಿಶ್ವದಾಖಲೆಯಾಗಿದೆ. ಹೋಪ್(67) ಎರಡನೇ ಸ್ಥಾನದಲ್ಲಿದ್ದರೆ, ಬಾಬರ್ ಅಜಂ(68), ವಿವಿ ರಿಚರ್ಡ್ಸ್(69) ಇನ್ನಿಂಗ್ಸ್ಗಳಲ್ಲಿ ಈ ಸಾದನೆ ಮಾಡಿದ್ದಾರೆ.
ಭಾರತೀಯರಲ್ಲಿ ಶಿಖರ್ ಧವನ್ 72 ಇನ್ನಿಂಗ್ಸ್ಗಳಲ್ಲಿ 3000 ರನ್ ಬಾರಿಸಿದ್ದಾರೆ. ಕೊಹ್ಲಿ ಈ ದಾಖಲೆಗಾಗಿ 75 ಇನ್ನಿಂಗ್ಸ್ ತೆಗೆದುಕೊಂಡಿದ್ದರು.