ಕರ್ನಾಟಕ

karnataka

ETV Bharat / sports

ವಿಂಡೀಸ್ ಸರಣಿಯಲ್ಲಿ ಕನ್ನಡಿಗರಿಗೆ ಮಣೆ ಸಾಧ್ಯತೆ... ರೋಹಿತ್​​ಗೆ ವಿಶ್ರಾಂತಿ, ಧವನ್​ಗೆ ಕೊಕ್..?

ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ನೇತೃತ್ವದಲ್ಲಿ ಗುರುವಾರ ಸಭೆ ಸೇರಲಿದ್ದು, ಕೆರಬಿಯನ್ನರ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸಲಿದ್ದಾರೆ.

By

Published : Nov 20, 2019, 11:15 PM IST

ವಿಂಡೀಸ್ ಸರಣಿ

ಮುಂಬೈ:ವಿಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ನಿಗದಿತ ಓವರ್​​ಗಳ ಪಂದ್ಯಕ್ಕೆ ಟೀಂ ಇಂಡಿಯಾ ಬಳಗ ಗುರುವಾರ ಪ್ರಕಟವಾಗಲಿದೆ.

ರೋಹಿತ್ ಶರ್ಮಾ ಸತತವಾಗಿ ಸರಣಿಗಳಲ್ಲಿ ಪಾಲ್ಗೊಂಡಿರುವುದರಿಂದ ವಿಂಡೀಸ್​ ಸರಣಿಯಿಂದ ಹೊರಗಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೇ ವೇಳೆ, ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಕಳಪೆ ಫಾರ್ಮ್​ನಿಂದ ಅವಕಾಶ ವಂಚಿತರಾಗುವ ಭೀತಿಯಲ್ಲಿದ್ದಾರೆ.

ಪೇಟಾ ವರ್ಷದ ಭಾರತೀಯ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಭಾಜನ

ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ನೇತೃತ್ವದಲ್ಲಿ ಗುರುವಾರ ಸಭೆ ಸೇರಲಿದ್ದು, ಕೆರಬಿಯನ್ನರ ವಿರುದ್ಧದ ಸರಣಿಗೆ ತಂಡವನ್ನು ಅಂತಿಮಗೊಳಿಸಲಿದ್ದಾರೆ.

ವಿಂಡೀಸ್ ವಿರುದ್ಧ ಭಾರತ ತಂಡ 3 ಏಕದಿನ ಹಾಗೂ 3 ಟಿ-ಟ್ವೆಂಟಿ ಪಂದ್ಯ ಆಡಲಿದೆ. ಡಿ.6ರಂದು ಮುಂಬೈನಲ್ಲಿ ನಡೆಯಲಿರುವ ಟಿ-20 ಪಂದ್ಯದ ಮೂಲಕ ಕೆರಬಿಯನ್ನರ ಈ ಪ್ರವಾಸ ಆರಂಭವಾಗಲಿದೆ. ಡಿ.15ರಂದು ಚೆನ್ನೈನಲ್ಲಿ ಮೊದಲ ಏಕದಿನ ಪಂದ್ಯ ಆಯೋಜನೆಯಾಗಿದೆ.

ಯಾವುದೂ ಅಸಾಧ್ಯವಲ್ಲ..! ಈ ದಾಖಲೆ ಬರೆಯುತ್ತಿರುವ ಮೊದಲ ಭಾರತೀಯ ಕೊಹ್ಲಿ!

ರೋಹಿತ್ ಶರ್ಮಾರಿಗೆ ವಿಂಡೀಸ್ ಸರಣಿಯಿಂದ ವಿಶ್ರಾಂತಿ ನೀಡಿ ಮುಂದಿನ ವರ್ಷದ ಆರಂಭದಲ್ಲಿ ಕಿವೀಸ್ ಪ್ರವಾಸದ ವೇಳೆ ತಂಡಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಆಯ್ಕೆ ಸಮಿತಿಯಲ್ಲಿದೆ. ಹಿಟ್​ಮ್ಯಾನ್ ಈ ವರ್ಷದಲ್ಲಿ ಐಪಿಎಲ್​ ಸೇರಿದಂತೆ ಒಟ್ಟಾರೆ 60 ಪಂದ್ಯವನ್ನಾಡಿದ್ದಾರೆ. ವಿಶೇಷವೆಂದರೆ ನಾಯಕ ಕೊಹ್ಲಿಗಿಂತಲೂ ರೋಹಿತ್ ಹೆಚ್ಚಿನ ಪಂದ್ಯ ಆಡಿದ್ದಾರೆ. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 5 ಟಿ-20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯವನ್ನಾಡಲಿದೆ.

ಧವನ್​ ಹಾಗೂ ರೋಹಿತ್ ಶರ್ಮಾ ಇಲ್ಲದ ತಂಡಕ್ಕೆ ಕನ್ನಡಿಗರು ಸೇರಿಕೊಳ್ಳುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ. ರಾಷ್ಟ್ರೀಯ ತಂಡದಲ್ಲಿ ಮಿಂಚು ಹರಿಸುತ್ತಿರುವ ಮಯಾಂಕ್ ಅಗರ್ವಾಲ್ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿರುವ ಕೆ.ಎಲ್​ ರಾಹುಲ್ ಕೆರಬಿಯನ್ನರ ವಿರುದ್ಧದ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ABOUT THE AUTHOR

...view details