ಗಯಾನ: ಭಾರತದ ಮಹಿಳಾ ತಂಡ ವಿಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 5 ರನ್ಗಳ ರೋಚಕ ಜಯ ಸಾಧಿಸಿ, ಟಿ20 ಸರಣಿಯಲ್ಲಿ 4-0ಯಲ್ಲಿ ಮುನ್ನಡೆ ಸಾಧಿಸಿದೆ.
ಮಳೆಯ ಕಾರಣ ಓವರ್ ಮಿತಿಯನ್ನು 9 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡವು ವಿಂಡೀಸ್ ಬೌಲಿಂಗ್ ದಾಳಿಗೆ ನಲುಗಿ ಕೇವಲ 50 ರನ್ ಗಳಿಸಿತ್ತು. ಪೂಜಾ ವಸ್ತ್ರಾಕರ್ ಮಾತ್ರ 10 ರನ್ ಗಳಿಸಿ ಎರಡಂಕಿ ಮೊತ್ತ ದಾಖಲಿಸಿದ್ದರು.
ವಿಂಡೀಸ್ ತಂಡದ ಹೇಲಿ ಮ್ಯಾಥ್ಯೂಸ್ 3 ವಿಕೆಟ್, ಅಫಿ ಫ್ಲೆಚೆರ್ 2 ವಿಕೆಟ್, ಶೆನೆಟ ಗ್ರಿಮಂಡ್ 2 ವಿಕೆಟ್ ಪಡೆದಿದ್ದರು.
51 ರನ್ಗಳ ಸಾಧಾರಣ ಗುರಿ ಪಡೆದ ವಿಂಡೀಸ್ ಮಹಿಳೆಯರು ಕೂಡ ರನ್ ಗಳಿಸಲು ಪರದಾಡಿ 9 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿ 5 ರನ್ಗಳಿಂದ ಸೋಲೊಪ್ಪಿಕೊಂಡರು. ಮ್ಯಾಥ್ಯೂಸ್ 11, ಚಿನಲ್ಲೆ ಹೆನ್ರಿ 11, ನಟಾಶ ಮೆಕ್ಲೆನ್ 10 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಭಾರತದ ಪರ ಅನುಜಾ ಪಾಟೀಲ್ 2 ವಿಕೆಟ್, ದೀಪ್ತಿ ಶರ್ಮಾ ಹಾಗೂ ರಾಧ ಯಾದವ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0ಯಲ್ಲಿ ಮುನ್ನಡೆ ಸಾಧಿಸಿದೆ.