ಬೆಂಗಳೂರು: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
ಸರಣಿ ಗೆಲ್ಲುವ ನಿಟ್ಟಿನಲ್ಲಿ ಟೀಂ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇನ್ನೊಂದೆಡೆ ಈ ಮ್ಯಾಚ್ ಗೆದ್ದು ಸರಣಿ ಸೋಲಿನ ಭೀತಿ ತಪ್ಪಿಸಿಕೊಳ್ಳಲು ಆಫ್ರಿಕನ್ನರು ಪ್ಲಾನ್ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಇಲ್ಲದೆ ಮೈದಾನಕ್ಕಿಳಿಯಲಿದೆ. ಅತ್ತ ದಕ್ಷಿಣ ಆಫ್ರಿಕಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ನೋರ್ಟ್ಜೆ ಬದಲಿಗೆ ಹೆಂಡ್ರಿಕ್ಸ್ ಕಣಕ್ಕಿಳಿಯುತ್ತಿದ್ದಾರೆ.
4 ದಿನಗಳ ಹಿಂದೆ ಕೊಹ್ಲಿ ಹೆಸರಿಗೆ ಸೇರಿದ್ದ ವಿಶ್ವದಾಖಲೆ ಮುರಿಯಲು ಹಿಟ್ಮ್ಯಾನ್ಗೆ ಬೇಕು 8 ರನ್