ವಿಶಾಖಪಟ್ಟಣಂ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಇದೇ ಪಂದ್ಯದಲ್ಲಿ ವಿಶೇಷ ದಾಖಲೆ ಮೂಡಿ ಬಂದಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 37 ಸಿಕ್ಸರ್ಗಳು ದಾಖಲಾಗಿವೆ. ಈ ಮೂಲಕ 2014ರ ನವೆಂಬರ್(26ರಿಂದ 30) ಪಾಕಿಸ್ತಾನ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ದಾಖಲಾಗಿದ್ದ 35 ಸಿಕ್ಸರ್ಗಳ ದಾಖಲೆ ಪತನವಾಗಿದೆ.
ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಇನ್ನಿಂಗ್ಸ್ನಲ್ಲಿ ಒಟ್ಟು 13 ಸಿಕ್ಸರ್ ದಾಖಲಾಗಿದ್ದವು. ದ್ವಿಶತಕ ವೀರ ಮಯಾಂಕ್ ಅಗರ್ವಾಲ್ ಹಾಗೂ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ತಲಾ ಆರು ಸಿಕ್ಸರ್ ಬಾರಿಸಿದ್ದರು. ಇನ್ನುಳಿದ ಒಂದು ಸಿಕ್ಸ್ ಜಡೇಜಾ ಬ್ಯಾಟಿನಿಂದ ಬಂದಿತ್ತು.
ದ.ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 7 ಸಿಕ್ಸರ್ ಬಾರಿಸಿತ್ತು. ಆಕರ್ಷಕ ಶತಕ ಸಿಡಿಸಿದ್ದ ಡೀನ್ ಎಲ್ಗರ್(4), ಫಾಫ್ ಡು ಪ್ಲೆಸಿಸ್(1) ಹಾಗೂ ಕ್ವಿಂಟನ್ ಡಿಕಾಕ್(2) ಸಿಕ್ಸರ್ ಬಾರಿಸಿದ್ದರು.