ಲಖನೌ:ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ಏಕದಿನ ಸರಣಿಯಲ್ಲಿ 1- 4 ರಿಂದ ಹಿನಾಯ ಸೋಲು ಅನುಭವಿಸಿರುವ ಭಾರತ ಮಹಿಳಾ ತಂಡ, ಟಿ-20 ಸರಣಿಯಲ್ಲೂ ಕೂಡಾ, ಕಳಪೆ ಪ್ರದಶ್ನ ನೀಡಿ 3 ಪಂದ್ಯಗಳ ಸರಣಿಯಲ್ಲಿ 2-0 ದಿಂದ ಸರಣಿ ಬಿಟ್ಟು ಕೊಟ್ಟಿದೆ. ಇಂದು ಟಿ-20 ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನಾದರೂ ಗೆಲ್ಲುವ ಮೂಲಕ ಗೌರವ ಉಳಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ಏಕದಿನ ಸರಣಿಯಲ್ಲಿ ಕಳಪೆ ಆಟವಾಡಿದ ಭಾರತ ತಂಡ ಟಿ-20 ಸರಣಿಯಲ್ಲಿ ಸವಾಲು ಎಸೆಯುವಲ್ಲಿ ಯಶಸ್ವಿಯಾಗಿಲ್ಲ. ಎರಡನೇ ಪಂದ್ಯದಲ್ಲಿ ಸ್ವಲ್ಪ ಮಟ್ಟಿನ ಫೈಟ್ ನೀಡಿದರು, ಪಂದ್ಯವನ್ನ ಗೆಲ್ಲಲಾಗದೇ ಸರಣಿ ಕಳೆದುಕೊಂಡಿತ್ತು. ಏಕಾನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ತಂಡ ತನ್ನ ಅದೃಷ್ಟದ ಜೊತೆಗೆ ಇಂದು ಗೌರವ ಉಳಿಸಿಕೊಳ್ಳಲು ಆಡಬೇಕಾಗಿದೆ.
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯನ್ನು 1-4 ರಲ್ಲಿ ಮಿಥಾಲಿ ಬಳಗ ಕಳೆದುಕೊಂಡಿತ್ತು. ಟಿ-20ಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದು, ಯುವ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭರ್ಜರಿ ಆಟವಾಡಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸಾಥ್ ಬರುತ್ತಿಲ್ಲ, ಇತ್ತ ಬೌಲಿಂಗ್ ವಿಭಾಗದಲ್ಲೂ ಕೂಡಾ ಯಾವುದೇ ರೀತಿಯ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ಬರುತ್ತಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಭಾರತ ತಂಡ ಮೊದಲ ಬಾರಿ ದಕ್ಷಿಣ ಆಫ್ರಿಕಾ ಎದುರು ಟಿ-20 ಸರಣಿ ಸೋಲು ಕಂಡಿದೆ. ಹಂಗಾಮಿ ನಾಯಕಿ ಸ್ಮೃತಿ ಮಂದಾನ ಎದುರಾಳಿಗಳನ್ನು ನಿಯಂತ್ರಿಸುವ ತಂತ್ರ ಹೆಣೆಯುವಲ್ಲಿ ವಿಫಲರಾಗಿದ್ದಾರೆ. ಕಳಪೆ ಫೀಲ್ಡಿಂಗ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರೀಕ್ಷಿತ ಮಟ್ಟದಲ್ಲಿ ಆಡದೇ ಇರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಓದಿ : ಇಂದಿನಿಂದ ಏಕದಿನ ಸರಣಿ: ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಜತೆ ಭಾರತದ ಫೈಟ್!