ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಮಳೆ ಕಾರಣದಿಂದ ರದ್ದಾಗಿದೆ.
ಮೊದಲ ಏಕದಿನ ಪಂದ್ಯಕ್ಕೆ ವರುಣ ಅಡ್ಡಿ... ಒಂದು ಎಸೆತ ಕಾಣದೆ ಪಂದ್ಯ ರದ್ದು - ಮಳೆಯಿಂದ ಮೊದಲ ಏಕದಿನ ಪಂದ್ಯ ರದ್ದು
ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾ ಮತ್ತು ಹರಿಣಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದರಿಂದ ಈ ಪಂದ್ಯವನ್ನು ರದ್ದು ಮಾಡಲಾಗಿದೆ.

ಮೊದಲ ಏಕದಿನ ಪಂದ್ಯಕ್ಕೆ ವರುಣ ಅಡ್ಡಿ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಆರಂಭಲ್ಲಿ ಕೊರೊನಾ ವೈರಸ್ ಆತಂಕ ಎದುರಾಗಿತ್ತು. ಸೋಂಕಿನ ಭೀತಿಯ ನಡುವೆಯೂ ಸರಣಿ ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ, ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ರದ್ದು ಮಾಡಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ ಹರಿಣಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿತ್ತು. ದ್ವಿತೀಯ ಪಂದ್ಯ ಮಾರ್ಚ್ 12ರಂದು ಲಖನೌ ಹಾಗೂ ಕೊನೆಯ ಏಕದಿನ ಪಂದ್ಯ ಮಾರ್ಚ್ 18ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.