ಹ್ಯಾಮಿಲ್ಟನ್:ಭಾರತ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿದ್ದ ಭಾರತ ತಂಡಕ್ಕೆ ರೆಫ್ರಿ ಪಂದ್ಯ ಸಂಭಾವನೆಯ ಶೇ. 80ರಷ್ಟು ಮೊತ್ತದ ದಂಡ ವಿಧಿಸಿದ್ದಾರೆ. ಬುಧವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿರುವುದಕ್ಕೆ ಭಾರತ ತಂಡ ಈ ದಂಡ ತೆರಬೇಕಿದೆ.
ಮೈದಾನದ ಅಂಪೈರ್ಗಳಾದ ಶಾನ್ ಹೈಗ್, ಲಾಂಗ್ಟನ್ ರಸೆರ್, 3ನೇ ಅಂಪೈರ್ ಬ್ರೂಶ್ ಆಕ್ಸನ್ಫೋರ್ಡ್ ಹಾಗೂ 4ನೇ ಅಂಪೈರ್ ಕ್ರಿಸ್ ಬ್ರೌನ್ ಕೊಹ್ಲಿಗೆ ದಂಡವಿಧಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ಗೆ ವರದಿ ನೀಡಿದ್ದರು. ನಿಗದಿತ ಸಮಯಕ್ಕಿಂತ 4 ಓವರ್ಗಳನ್ನು ಭಾರತ ತಂಡ ತಡವಾಗಿ ಮಾಡಿದ್ದರಿಂದ ಓವರ್ಗೆ 20 ಪರ್ಸೆಂಟ್ನಂತೆ ನಾಲ್ಕು ಓವರ್ಗಳಿಗೆ ಶೇ. 80ರಷ್ಟನ್ನು ದಂಡವಾಗಿ ಕೊಹ್ಲಿ ಬಳಗ ಕಟ್ಟಬೇಕಿದೆ.