ವೆಲ್ಲಿಂಗ್ಟನ್: ಕಿವಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದ್ದ ಭಾರತ ತಂಡ, ಎರಡನೇ ದಿನದ ಮೊದಲ ಸೆಷನ್ನಲ್ಲೇ ತನ್ನೆಲ್ಲಾ ವಿಕೇಟ್ ಕಳೆದುಕೊಂಡಿದೆ.
ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಉಪನಾಯಕ ರಹಾನೆ ಮತ್ತು ಕೀಪರ್ ರಿಶಬ್ ಪಂತ್ ಜೋಡಿ ಮೊದಲ ಸೆಷನ್ನ 3ನೇ ಓವರ್ನಲ್ಲೇ ಬೇರ್ಪಟ್ಟಿತು. ನಂತರ ಬಂದ ಆರ್. ಅಶ್ವಿನ್ ಕೂಡ ಮೊದಲ ಎಸೆತದಲ್ಲೇ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ರಹಾನೆ 46 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು.
ಅಂತಿಮವಾಗಿ 165 ರನ್ಗಳ ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ನ್ಯೂಜಿಲ್ಯಾಂಡ್ ಪರ ಬಿಗು ದಾಳಿ ನಡೆಸಿದ ಟಿಮ್ ಸೌತಿ ಮತ್ತು ಕೈಲ್ ಜಾಮಿಸನ್ ತಲಾ 4 ವಿಕೇಟ್ ಪಡೆದರೆ, ಬೋಲ್ಟ್ 1 ವಿಕೇಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್ :
ಓವರ್ 68.1, 165/10