ಕರ್ನಾಟಕ

karnataka

ETV Bharat / sports

ವಿಶ್ವಶ್ರೇಷ್ಠ ವಿರಾಟನಿಗೆ ವೀಕ್​ನೆಸ್​ ಎಂಬುದೇ ಇಲ್ಲ, ಔಟ್ ಮಾಡುವುದೇಗೆ? : ಮೋಯಿನ್ ಅಲಿ - ಎಂಎ ಚಿದಂಬರಂ ಸ್ಟೇಡಿಯಂ

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅವರ ಬ್ಯಾಟಿಂಗ್​ ಮಾಡುವಾಗ ಯಾವುದೇ ರೀತಿಯ ವೀಕ್​ನೆಸ್​ ಇರುವುದನ್ನು ನಾನು ನೋಡಿಲ್ಲ, ಅವರನ್ನು ಔಟ್​ ಮಾಡುವುದು ಹೇಗೆ ಎಂದನು ನನಗೆ ಗೊತ್ತಿಲ್ಲ ಎಂದು ಇಂಗ್ಲೆಂಡ್ ಆಲ್​ರೌಂಡರ್​ ಮೊಯೀನ್ ಅಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಮೊಯೀನ್ ಅಲಿ
ವಿರಾಟ್​ ಕೊಹ್ಲಿ ಮೊಯೀನ್ ಅಲಿ

By

Published : Jan 31, 2021, 1:24 PM IST

Updated : Jan 31, 2021, 2:02 PM IST

ಚೆನ್ನೈ:ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅವರನ್ನು ಹೇಗೆ ಔಟ್​ ಮಾಡುವುದು ಎಂಬುದು ನನಗೆ ಗೊತ್ತಿಲ್ಲ, ಏಕೆಂದರೆ ಅವರೊಬ್ಬ ವಿಶ್ವಶ್ರೇಷ್ಠ ಕ್ರಿಕೆಟಿಗನಾಗಿದ್ದು, ಅವರಿಗೆ ಯಾವುದೇ ರೀತಿಯ ವೀಕ್​ನೆಸ್​ ಇಲ್ಲ ಎಂದು ಇಂಗ್ಲೆಂಡ್​ ಆಲ್​ರೌಂಡರ್​ ಮತ್ತು ಆರ್​ಸಿಬಿ ಮಾಜಿ ಆಟಗಾರನಾಗಿರುವ ಮೋಯಿನ್ ಅಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡ ಭಾರತದ ವಿರುದ್ಧ 4 ಟೆಸ್ಟ್​, 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲು ಭಾರತಕ್ಕೆ ಪ್ರವಾಸ ಕೈಗೊಂಡಿದೆ. ಫೆಬ್ರವರಿ 5ರಿಂದ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್​ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಕೊನೆಯ ಮೂರು ಟೆಸ್ಟ್​ ಪಂದ್ಯಗಳಿಂದ ಹೊರಬಂದಿದ್ದ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡ ಸೇರಿಕೊಂಡಿದ್ದು, ಭಾರತ ತಂಡ ಬಲಿಷ್ಠವಾಗಿದೆ ಎಂದು ಅಲಿ ಅಭಿಪ್ರಾಯಪಟ್ಟಿದ್ದಾರೆ.

ಮೊಯೀನ್ ಅಲಿ

"ನಾವು ಅವರನ್ನು(ಕೊಹ್ಲಿ) ಹೇಗೆ ಔಟ್ ಮಾಡಬೇಕು? ಆತನೊಬ್ಬ ಅದ್ಭುತ ಆಟಗಾರ, ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್ ಹಾಗೂ ಇತರರನ್ನು ಅತ್ಯುತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತಾರೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿ ಗೆದ್ದ ಮೇಲಂತೂ ಅವರು ಇನ್ನು ಹೆಚ್ಚಿನ ರೀತಿಯಲ್ಲಿ ಪ್ರೇರೇಪಿಸುತ್ತಾರೆ ಎಂಬುದು ನನಗೆ ಖಾತ್ರಿಯಿದೆ" ಎಂದು ವಿಡಿಯೋ ಕಾನ್ಫರೆನ್ಸ್​ನಲ್ಲಿ ಮೋಯಿನ್ ಅಲಿ ಹೇಳಿದ್ದಾರೆ.

ಆದರೆ ಅವರನ್ನು ಔಟ್​ ಮಾಡಲು ನಾವು ಹೇಗೆ ಹೋಗಬೇಕೆಂದು ನನಗೆ ತಿಳಿದಿಲ್ಲ. ಏಕೆಂದರೆ ಅವರಿಗೆ ಯಾವುದೇ ರೀತಿಯ ದೌರ್ಬಲ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಮ್ಮಲ್ಲಿ ಉತ್ತಮ ಬೌಲಿಂಗ್ ದಾಳಿಯಿದೆ. ಮತ್ತು ವೇಗದ ಬೌಲರ್​ಗಳಿದ್ದಾರೆ ನೋಡೋಣ ಎಂದಿರುವ ಅವರು, ಕೊಹ್ಲಿಯನ್ನು ಅದ್ಭುತ ವ್ಯಕ್ತಿ ಮತ್ತು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬ ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಕೊಹ್ಲಿ vs ರೂಟ್​.. ನಾಯಕರ ನಡುವಿನ ಕಾದಾಟದಲ್ಲಿ ಗೆಲ್ಲೋರ್ಯಾರು?

Last Updated : Jan 31, 2021, 2:02 PM IST

ABOUT THE AUTHOR

...view details