ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ಗೂ ಮುನ್ನ ಜಿಮ್​ನಲ್ಲಿ ಬೆವರಿಳಿಸಿದ ಕಿಂಗ್ ಕೊಹ್ಲಿ - ಪಿಂಕ್​ ಬಾಲ್​ ಟೆಸ್ಟ್​

ಫಿಟ್​ನೆಸ್​ನಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರನ್ನು ಹೊಂದಿರುವ ವಿರಾಟ್​ ಕೊಹ್ಲಿ ಮೈದಾನದಲ್ಲಿ ಅಭ್ಯಾಸಕ್ಕೆ ಹೇಗೆ ಹೊತ್ತು ನೀಡುತ್ತಾರೋ ಹಾಗೆ ದೇಹವನ್ನು ಫಿಟ್​ ಆಗಿರಿಸಲು ಮೊದಲ ಆದ್ಯತೆ ನೀಡುತ್ತಾರೆ. ಇದೀಗ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ಗೂ ಮುನ್ನ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Feb 20, 2021, 2:19 PM IST

ಅಹ್ಮದಾಬಾದ್​ : ಇಂಗ್ಲೆಂಡ್ ವಿರುದ್ಧದ ಮೊಟೆರಾದಲ್ಲಿ ನಡೆಯಲಿರುವ 3ನೇ ಟೆಸ್ಟ್​ಗೂ ಮುನ್ನ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಬೆವರು ಹರಿಸುತ್ತಿದ್ದಾರೆ.

4 ಪಂದ್ಯಗಳ ಟೆಸ್ಟ್​ ಸರಣಿ ಈಗಾಗಲೆ 1-1ರಲ್ಲಿ ಸಮಬಲವಾಗಿದೆ. ಫೆಬ್ರವರಿ 24 ರಿಂದ ಡೇ ಅಂಡ್​ ನೈಟ್​ ಟೆಸ್ಟ್​ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಸ್ಟೇಡಿಯಂ ಆಗಿರುವ ಮೊಟೆರಾದಲ್ಲಿ ನಡೆಯುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಕೂಡ ಇದೇ ಆಗಲಿದೆ.

ಫಿಟ್​ನೆಸ್​ನಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರನ್ನು ಹೊಂದಿರುವ ವಿರಾಟ್​ ಕೊಹ್ಲಿ ಮೈದಾನದಲ್ಲಿ ಅಭ್ಯಾಸಕ್ಕೆ ಹೇಗೆ ಹೊತ್ತು ನೀಡುತ್ತಾರೋ ಹಾಗೆ ದೇಹವನ್ನು ಫಿಟ್​ ಆಗಿರಿಸಲು ಮೊದಲ ಆದ್ಯತೆ ನೀಡುತ್ತಾರೆ. ಇದೀಗ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ಗೂ ಮುನ್ನ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಶುಕ್ರವಾರ ವೇಯ್ಟ್ ಲಿಫ್ಟಿಂಗ್ ಮಾಡುತ್ತಿರುವ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಸ್ಥಿರತೆ ಆಟಗಾರರಿಗೆ ಪ್ರಮುಖವಾದ ಅಂಶ ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ ಕಳೆದು 2 ಪಂದ್ಯಗಳಿಂದ ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾಗಿದ್ದಾರೆ. ಆದರೆ ಕೊನೆಯ ಬಾರಿಗೆ ಶತಕ ಸಿಡಿಸಿ ಸುಮಾರು 20 ತಿಂಗಳೇ ಕಳೆದಿವೆ. ಇದೀಗ ನೂತನ ಕ್ರೀಡಾಂಗಣದಲ್ಲಿ ಹೊಸ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details