ಪುಣೆ :ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.
3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಕೊಹ್ಲಿ 60 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 56 ರನ್ಗಳಿಸಿದ್ದರು. ಈ ಮೂಲಕ ತವರಿನಲ್ಲಿ ಮೂರು ಮಾದರಿಯ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದರು.
ಭಾರತದಲ್ಲಿ ಹೆಚ್ಚು ರನ್ಗಳಿಸಿದ 2ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೊದಲು ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಈ ಮೈಲುಗಲ್ಲನ್ನು ತಲುಪಿದ್ದಾರೆ. ಅಲ್ಲದೆ ತವರಿನಲ್ಲಿ 10 ಸಾವಿರ ಪೂರೈಸಿದ ವಿಶ್ವದ 6ನೇ ಬ್ಯಾಟ್ಸ್ಮನ್ ಎನಿಸಿಕೊಂಡರು ಕೊಹ್ಲಿ. ಆದರೆ, ವಿರಾಟ್ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎನಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮೈಲುಗಲ್ಲಿಗಾಗಿ 219 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತವರಿನ ಅಂಗಳದಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟ್ಸಮನ್ಗಳು
- ಸಚಿನ್ ತೆಂಡೂಲ್ಕರ್-14,192
- ರಿಕಿ ಪಾಂಟಿಂಗ್-13,117
- ಜಾಕ್ ಕಾಲೀಸ್-12,305
- ಕುಮಾರ್ ಸಂಗಾಕ್ಕರ-12,043
- ಮಹೇಲಾ ಜಯವರ್ಧನೆ-11,679
- ವಿರಾಟ್ ಕೊಹ್ಲಿ-10,002
ಇದನ್ನು ಓದಿ:ಅರ್ಧಶತಕವನ್ನು ದಿವಂಗತ ತಂದೆಗೆ ಅರ್ಪಿಸಿ ಕಣ್ಣೀರಿಟ್ಟ ಕೃನಾಲ್ ಪಾಂಡ್ಯ