ಪುಣೆ: ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕ ಜೋಡಿಯಾಗಿ 5000 ರನ್ ಪೂರೈಸುವ ಮೂಲಕ ಹೊಸ ಮೈಲಿಗಲ್ಲನ್ನು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಜೋಡಿ ಎನಿಸಿಕೊಂಡಿದ್ದಾರೆ.
ರೋಹಿತ್ ಮತ್ತು ಧವನ್ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಆರಂಭಿಕ ಜೋಡಿಯಾಗಿ 5 ಸಾವಿರ ರನ್ ಪೂರೈಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಮಾತ್ರ ಈ ಸಾಧನೆ ಮಾಡಿರುವ ಏಕೈಕ ಭಾರತೀಯ ಜೋಡಿಯಾಗಿದ್ದಾರೆ.
ಸಚಿನ್-ಗಂಗೂಲಿ 136 ಇನ್ನಿಂಗ್ಸ್ಗಳಲ್ಲಿ 6609 ರನ್ ಬಾರಿಸಿದ್ದಾರೆ. 21 ಶತಕ ಮತ್ತು 23 ಅರ್ಧಶತಕ ಸೇರಿವೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ 111 ಇನ್ನಿಂಗ್ಸ್ಗಳಲ್ಲಿ 5000 ಗಡಿ ದಾಟಿದ್ದಾರೆ. ಈ ಜೋಡಿ 17 ಶತಕ 15 ಅರ್ಧಶತಕವನ್ನು ಒಳಗೊಂಡಿವೆ.
ಭಾರತೀಯ ಈ ಜೋಡಿಯನ್ನು ಹೊರತುಪಡಿಸಿದರೆ, ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್( 5372 ರನ್) ಮತ್ತ ವೆಸ್ಟ್ ಇಂಡೀಸ್ನ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ (5150 ರನ್) ಜೋಡಿ ಮಾತ್ರ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಜೊತೆಯಾಟ ನೀಡಿರುವ ಆರಂಭಿಕ ಜೋಡಿಯಾಗಿದೆ.
ಇದನ್ನು ಓದಿ:ಭಾರತ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಪ್ರಾಬಲ್ಯದ ಯುಗ ಸೃಷ್ಟಿಸಲಿದೆ: ಇಯಾನ್ ಚಾಪೆಲ್ ಭವಿಷ್ಯ