ಪುಣೆ :ಭಾರತ ಮತ್ತು ಇಂಗ್ಲೆಂಡ್ ತಂಡಗಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೆ ಪಾತ್ರವಾಗಿವೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದ ವೇಳೆ ಈ ದಾಖಲೆ ಬ್ರೇಕ್ ಆಗಿದೆ.
ಈ ಸರಣಿಯಲ್ಲಿ ಎರಡು ತಂಡಗಳಿಂದ 63(ಭಾರತದ ಇನ್ನಿಂಗ್ಸ್ ಅಂತ್ಯಕ್ಕೆ) ಸಿಕ್ಸರ್ಗಳು ದಾಖಲಾಗಿವೆ. ಈ ಹಿಂದೆ 3 ಪಂದ್ಯಗಳ ಸರಣಿಯಲ್ಲಿ ಈ ದಾಖಲೆ ನ್ಯೂಜಿಲ್ಯಾಂಡ್-ಶ್ರೀಲಂಕಾ ತಂಡಗಳ ಹೆಸರಿನಲ್ಲಿತ್ತು. 2019ರಲ್ಲಿ ಇತ್ತಂಡಗಳು 57 ಸಿಕ್ಸರ್ ಬಾರಿಸಿದ್ದವು.