ಕರ್ನಾಟಕ

karnataka

ETV Bharat / sports

ಅಂತಿಮ 2 ಟೆಸ್ಟ್​ಗೆ ಭಾರತ ತಂಡ ಪ್ರಕಟ: ಗಾಯದಿಂದ ಚೇತರಿಸಿಕೊಂಡಿರುವ ಉಮೇಶ್​ ಯಾದವ್​ ಕಮ್​ಬ್ಯಾಕ್

ಉಮೇಶ್ ಯಾದವ್ ಬದಲು​ ಮುಂಬೈ ವೇಗಿ ಶಾರ್ದೂಲ್​ ಠಾಕೂರ್​ಗೆ ಅವಕಾಶ ನೀಡಲಾಗಿತ್ತು. ಇದೀಗ ವಿಜಯ್ ಹಜಾರೆಗಾಗಿ ಅವರನ್ನು ಬಿಟ್ಟುಕೊಡಲಾಗಿದೆ.

3ನೇ ಪಂದ್ಯಕ್ಕೆ ಭಾರತ ತಂಡ ಪ್ರಕರಣ
3ನೇ ಪಂದ್ಯಕ್ಕೆ ಭಾರತ ತಂಡ ಪ್ರಕರಣ

By

Published : Feb 17, 2021, 4:20 PM IST

ಮುಂಬೈ: ಇಂಗ್ಲೆಂಡ್​ ವಿರುದ್ಧ ಅಹಮದಾಬಾದ್​ನಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್​ ಪಂದ್ಯಗಳಿಗೆ ಬಿಸಿಸಿಐ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಉಮೇಶ್​ ಯಾದವ್​ಗೆ​ ಅವಕಾಶ ನೀಡಲಾಗಿದೆ. ಆದರೆ, ಫಿಟ್​ನೆಸ್​ ಟೆಸ್ಟ್​​ಗೆ ಒಳಗಾಗಲಿದ್ದು, ಉತ್ತೀರ್ಣರಾದ ನಂತರ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಉಮೇಶ್ ಯಾದವ್ ಬದಲು​ ಮುಂಬೈ ವೇಗಿ ಶಾರ್ದುಲ್ ಠಾಕೂರ್​ಗೆ ಅವಕಾಶ ನೀಡಲಾಗಿತ್ತು. ಇದೀಗ ವಿಜಯ್ ಹಜಾರೆಗಾಗಿ ಅವರನ್ನು ಬಿಟ್ಟುಕೊಡಲಾಗಿದೆ.

ಇನ್ನು ಎರಡನೇ ಟೆಸ್ಟ್​ ವೇಳೆ ಗಾಯಕೊಂಡಿದ್ದ ಗಿಲ್​ ಚೇತರಿಸಿಕೊಂಡಿರುವುದರಿಂದ ಕೊನೆಯ 2 ಟೆಸ್ಟ್​ಗಳಿಗೆ ಹೆಸರಿಸಲಾಗಿದೆ, ಉಳಿದಂತೆ 2ನೇ ಟೆಸ್ಟ್​ನಲ್ಲಿ ಇದ್ದ ತಂಡದ ಎಲ್ಲ ಆಟಗಾರರು ಕೂಡ ಅವಕಾಶ ಪಡೆದಿದ್ದಾರೆ.

ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಾಯಾಂಕ್ ಅಗರ್​ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್​), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್​) ಆರ್. ಅಶ್ವಿನ್, ಕುಲದೀಪ್ ಯಾದವ್, ಆಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್​ ಸಿರಾಜ್

ಇದನ್ನು ಓದಿ:ಐಸಿಸಿ ಟೆಸ್ಟ್​ ಶ್ರೇಯಾಂಕ​: ಟಾಪ್​ 5ಗೆ ಎಂಟ್ರಿ ಕೊಟ್ಟ ಅಶ್ವಿನ್, ಪಂತ್​ಗೆ ಕರಿಯರ್ ಬೆಸ್ಟ್ ರ‍್ಯಾಂಕಿಂಗ್

ABOUT THE AUTHOR

...view details