ಚೆನ್ನೈ (ತಮಿಳುನಾಡು) :ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಕಠಿಣ ಬೌಲರ್ ಎಂದು ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದು, ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ-20 ಪಂದ್ಯಗಳ ಸರಣಿ ಆಡಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದೆ. ನಂತರ ಉಳಿದ ಎರಡು ಟೆಸ್ಟ್ ಹಾಗೂ ಟಿ- 20 ಸರಣಿ ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಯಲಿವೆ.
ಸರಣಿಗೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್, ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಕಠಿಣ ಬೌಲರ್, ಅವರನ್ನು ಎದರಿಸಲು ಉತ್ಸುಕನಾಗಿದ್ದೇನೆ. ಅವರ ಬೌಲಿಂಗ್ ಶೈಲಿ ವಿಶಿಷ್ಠವಾಗಿದೆ. ಅವರು ಎಲ್ಲ ಕೋನಗಳಲ್ಲಿ ಬೌಲಿಂಗ್ ಮಾಡುತ್ತಾರೆ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತೇನೆ. ಭಾರತದ ಪಿಚ್‌ಗಳು ಬುಮ್ರಾ, ಇಶಾಂತ್ ಶರ್ಮಾ, ಮತ್ತು ಮೊಹಮ್ಮದ್ ಸಿರಾಜ್ ಸಹಕಾರಿಯಾಗಲಿದ್ದು, ಇವರುಗಳನ್ನು ಎದುರಿಸಲು ಕಾತರನಾಗಿದ್ದೆನೆ ಎಂದರು.
ಡೊಮ್ ಬೆಸ್ ಮತ್ತು ಜ್ಯಾಕ್ ಲೀಚ್ ಅವರ ಸ್ಪಿನ್ ಜೋಡಿ ಭಾರತ ಸರಣಿಯಲ್ಲಿ ಪ್ರದರ್ಶನ ನೀಡಲು ತಮ್ಮ ಮೇಲೆ ಯಾವುದೇ ಒತ್ತಡ ಹಾಕಿಕೊಳ್ಳಬಾರದು. ಬದಲಿಗೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವ ಗುರಿಯನ್ನು ಹೊಂದಬೇಕು ಎಂದು ಬರ್ನ್ಸ್ ಹೇಳಿದ್ದಾರೆ.
ಓದಿ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಚೆನ್ನೈಗೆ ಬಂದಿಳಿದ ಕೊಹ್ಲಿ: ವಿಡಿಯೋ