ಅಹ್ಮದಾಬಾದ್:ಇಂಗ್ಲೆಂಡ್ ವಿರುದ್ಧದ 4ನೇ ಟಿ 20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್(57) ಮತ್ತು ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಆಟದ ನೆರವಿನಿಂದ ಇಂಗ್ಲೆಂಡ್ ತಂಡಕ್ಕೆ 186 ರನ್ಗಳ ಗುರಿ ನೀಡಿದೆ.
ಅಹ್ಮದಾಬಾದ್ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (12), ಕೆ.ಎಲ್ ರಾಹುಲ್ (14) ಮೊದಲ ವಿಕೆಟ್ ನಷ್ಟಕ್ಕೆ 21 ರನ್ಗಳ ಜೊತೆಯಾಟವಾಡಿದ್ರು. ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಹಿಟ್ಮ್ಯಾನ್ ಅಬ್ಬರಿಸುವ ಮುನ್ಸೂಚನೆ ನೀಡಿದ್ರು.
ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಇದನ್ನೂ ಓದಿ: ಟಿ-20ಯಲ್ಲಿ ಮೊದಲ ಬಾರಿಗೆ ವಿರಾಟ್ ಸ್ಟಂಪ್ ಔಟ್: ರಶೀದ್ ಗೂಗ್ಲಿಗೆ ವಿಕೆಟ್
ಆದರೆ ಜೋಪ್ರಾ ಆರ್ಚರ್ ಓವರ್ನಲ್ಲಿ ಕಾಟ್ & ಬೌಲ್ಡ್ ಆಗುವ ಮೂಲಕ ಶರ್ಮಾ ನಿರಾಸೆ ಮೂಡಿಸಿದ್ರು. ಇದರ ಬೆನ್ನಲ್ಲೇ ರಾಹುಲ್(14) ಕೂಡ ಮತ್ತೊಮ್ಮೆ ವೈಫಲ್ಯ ಕಂಡರು. ಈ ವೇಳೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಚೊಚ್ಚಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ವಿರಾಟ್ ಕೊಹ್ಲಿ ಸ್ಟಂಪ್ಡ್ ಔಟ್ ಆಗುವ ಮೂಲಕ ನಿರಾಸೆಗೊಳಗಾದರು.
5ನೇ ವಿಕೆಟ್ಗೆ ಒಂದಾದ ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇದೇ ವೇಳೆ ಯಾದವ್ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು.
57ರನ್ಗಳಿಕೆ ಮಾಡಿದ್ದ ವೇಳೆ ಯಾದವ್ ವಿವಾದಿತ ಕ್ಯಾಚ್ಗೆ ಬಲಿಯಾದರು. ರಿಷಭ್ ಪಂತ್ ಆಕರ್ಷಕ 30 ರನ್ಗಳಿಸಿದ್ರೆ, ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ 37ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 185ರನ್ಗಳಿಕೆ ಮಾಡಿದ್ದು, ಎದುರಾಳಿ ಇಂಗ್ಲೆಂಡ್ ತಂಡಕ್ಕೆ 186ರನ್ ಟಾರ್ಗೆಟ್ ನೀಡಿದೆ.
ಇಂಗ್ಲೆಂಡ್ ತಂಡದ ಪರ ಆರ್ಚರ್ 4ವಿಕೆಟ್ ಪಡೆದುಕೊಂಡ್ರೆ, ರಶೀದ್, ಮಾರ್ಕ್ ವುಡ್, ಸ್ಟೋಕ್ಸ್ ಹಾಗೂ ಕರ್ರನ್ ತಲಾ 1ವಿಕಟ್ ಪಡೆದುಕೊಂಡರು.