ಕರ್ನಾಟಕ

karnataka

ETV Bharat / sports

ಪಾಂಡ್ಯ-ಪಂತ್ ಆರ್ಭಟ: ಸರಣಿ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್​ಗೆ 330ರನ್​ಗಳ​ ಗುರಿ - India post 329/10

ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಶಿಖರ್ ಧವನ್​ 56 ಎಸೆತಗಳಲ್ಲಿ 67 ರನ್​, ರಿಷಭ್ ಪಂತ್ 62 ಎಸೆತಗಳಲ್ಲಿ 78 ಮತ್ತು ಹಾರ್ದಿಕ್ ಪಾಂಡ್ಯ 44 ಎಸೆತಗಳಲ್ಲಿ 64 ರನ್​ಗಳಿಸಿ ತಂಡದ ಮೊತ್ತವನ್ನು 300 ರ ಗಡಿ ದಾಟಿಸಿದರು.

ಭಾರತ vs ಇಂಗ್ಲೆಂಡ್ 3ನೇ ಎಕದಿನ
ಭಾರತ vs ಇಂಗ್ಲೆಂಡ್ 3ನೇ ಎಕದಿನ

By

Published : Mar 28, 2021, 5:31 PM IST

Updated : Mar 28, 2021, 5:51 PM IST

ಪುಣೆ: ಶಿಖರ್ ಧವನ್​, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಕೊನೆಯ 10 ಓವರ್​ಗಳಲ್ಲಿ ನಾಟಕೀಯ​ ಕುಸಿತ ಕಂಡು ತನ್ನ ಕೋಟದ 50 ಓವರ್​ಗಳನ್ನು ಮುಗಿಸಲಾರದೆ 48.1 ಓವರ್​ಗಳಲ್ಲಿ 329 ರನ್​ಗಳಿಗೆ ಆಲೌಟ್ ಆಗಿದೆ.

ಸರಣಿ ಗೆಲ್ಲಲು ನಿರ್ಣಾಯಕವಾಗಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್​ ಸೋತ ಟೀಂ ಇಂಡಿಯಾ ಎಚ್ಚರಿಕೆಯ ಆರಂಭ ಪಡೆಯಿತು. ಬೃಹತ್ ಮೊತ್ತ ದಾಖಲಿಸುವ ಉದ್ದೇಶಕ್ಕೆ ಬ್ಯಾಟ್ಸ್​ಮನ್​ಗಳಾದ ರೋಹಿತ್ (37) ಮತ್ತು ಶಿಖರ್ ಧವನ್​ ಮೊದಲ ವಿಕೆಟ್​ಗೆ 103 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು.

ಆದರೆ 37 ಎಸೆತಗಳಲ್ಲಿ 37 ರನ್​ಗಳಿಸಿದ್ದ ರೋಹಿತ್ ಶರ್ಮಾ, ರಶೀದ್​ ಸ್ಪಿನ್​​ ಮೋಡಿ ಅರಿಯಲಾರದೆ ಬೌಲ್ಡ್​ ಆದರು. ನಂತರ ಬಂದ ಕೊಹ್ಲಿ ಕೂಡ 7 ರನ್​ಗಳಿಸಿ ಮೊಯಿನ್​ ಅಲಿ ಬೌಲಿಂಗ್​ನಲ್ಲಿ ಬೌಲ್ಡ್​ ಆಗಿ ಪೆವಿಲಿಯನ್ ಸೇರಿಕೊಂಡರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಇಂದು 18 ಎಸೆತಗಳಲ್ಲಿ ಕೇವಲ 7 ರನ್​ಗಳಿಸಿ ಲಿವಿಂಗ್​ಸ್ಟೋನ್​ಗೆ ವಿಕೆಟ್​ ಒಪ್ಪಿಸಿದರು.

ರಿಷಭ್ ಪಂತ್-ಪಾಂಡ್ಯ ಬೊಂಬಾಟ್​ ಜೊತೆಯಾಟ

157ಕ್ಕೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಒಂದಾದ ಪಂತ್ ಮತ್ತು ಪಾಂಡ್ಯ ಜೋಡಿ 11.4 ಓವರ್‌ಗಳ ಕಾಲ​ ಬ್ಯಾಟಿಂಗ್ ಮಾಡಿ 5ನೇ ವಿಕೆಟ್ ಜೊತೆಯಾಟದಲ್ಲಿ 99 ರನ್‌ಸೂರೆಗೈದರು. ಶತಕದತ್ತ ಮುನ್ನುಗ್ಗುತ್ತಿದ್ದ ರಿಷಭ್ ಪಂತ್,​ ಸ್ಯಾಮ್​ ಕರ್ರನ್​ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್​ ಬಟ್ಲರ್​ಗೆ ಕ್ಯಾಚ್​ ನೀಡಿ ಔಟಾದರು. ಪೆವಿಲಿಯನ್​ಗೆ ಹಿಂತಿರುಗುವ ಮುನ್ನ ಪಂತ್ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ 78ರನ್​ಗಳಿಸಿದ್ದರು.

ಪಂತ್ ಔಟಾದ ಬೆನ್ನಲ್ಲೇ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ, 44 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 64 ರನ್​ಗಳಿಸಿ ಔಟಾದರು. ಕಳೆದ 2 ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ರನ್​ಗಳಿಸಿದ್ದ ಭಾರತ ಇಂದು ಕೊನೆಯ ಓವರ್​ಗಳಲ್ಲಿ ರನ್​ಗಳಿಸಲಾಗದೆ ನಿರಂತರ ವಿಕೆಟ್​ ಕಳೆದುಕೊಂಡಿತು. ಪಾಂಡ್ಯ ಔಟಾದ ನಂತರ ಭಾರತ ಕೇವಲ 53 ರನ್​ಗಳಿಸಲಷ್ಟೇ ಶಕ್ತವಾಗಿ ತನ್ನೆಲ್ಲಾ ವಿಕೆಟ್‌ಗಳನ್ನು​ ಕಳೆದುಕೊಂಡಿತು.

ಕೊನೆಯಲ್ಲಿ ಅಬ್ಬರಿಸಿದ ಶಾರ್ದುಲ್ ಠಾಕೂರ್​ 21 ಎಸೆತಗಳಲ್ಲಿ 30 ರನ್​ಗಳಿಸಿದರೆ, ಕೃನಾಲ್ ಪಾಂಡ್ಯ ನಿಧಾನಗತಿಯ 25ರನ್​ಗಳಿಸಿದರು. ಭುವನೇಶ್ವರ್ 3, ಪ್ರಸಿಧ್ ಕೃಷ್ಣ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಇಂಗ್ಲೆಂಡ್ ಪರ ಮಾರ್ಕ್​ವುಡ್​ 34ಕ್ಕೆ 3, ಆದಿಲ್ ರಶೀದ್​ 81ಕ್ಕೆ 2, ಮೊಯಿನ್ ಅಲಿ, ಲಿವಿಂಗ್​ಸ್ಟೋನ್​, ಟಾಪ್ಲೆ, ಸ್ಯಾಮ್ ಕರ್ರನ್​ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರೋಹಿತ್-ಧವನ್ ಜೋಡಿ

Last Updated : Mar 28, 2021, 5:51 PM IST

ABOUT THE AUTHOR

...view details