ಚೆನ್ನೈ: ಇಲ್ಲಿನ ಪಿ. ಚಿದಂಬರಂ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಆಂಗ್ಲರ ಪಡೆ ಎರಡನೇ ದಿನವೂ ಟೀಂ ಇಂಡಿಯಾ ಬೌಲರ್ಗಳ ಮೇಲೆ ಭರ್ಜರಿ ಸವಾರಿ ನಡೆಸಿದೆ.
ಎರಡನೇ ದಿನದಾಟ ಆರಂಭವಾಗುವುದಕ್ಕೂ ಮುಂಚಿತವಾಗಿ ಮೈದಾನದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಹುರಿದುಂಬಿಸಿ, ಧೈರ್ಯದ ಮಾತುಗಳನ್ನಾಡಿದ್ದಾರೆ. ಇದರ ವಿಡಿಯೋ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿದೆ.