ಅಹಮದಾಬಾದ್: ಭಾರತ-ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿ ನಡೆಯಲಿದ್ದು, ಸಂಜೆ 7 ಗಂಟೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭಗೊಳ್ಳಲಿದೆ.
ಪಂದ್ಯಕ್ಕಾಗಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಸಜ್ಜುಗೊಂಡಿದೆ. ಪಂದ್ಯ ವೀಕ್ಷಣೆ ಮಾಡಲು ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಐದು ಪಂದ್ಯಗಳಲ್ಲೂ ಶೇ.50ರಷ್ಟು ಪ್ರೇಕ್ಷಕರು ಮಾತ್ರ ಮೈದಾನದಲ್ಲಿರಲಿದ್ದಾರೆ ಎಂದಿದೆ. ಮಾರ್ಚ್ 12ರಿಂದ 20ರವರೆಗೆ ಟಿ-20 ಪಂದ್ಯಗಳ ಸರಣಿ ನಡೆಯಲಿದೆ.