ಕರ್ನಾಟಕ

karnataka

ETV Bharat / sports

ಚೆಂಡಿನಲ್ಲಿ ರಂಧ್ರ: ಮೊದಲ ಪಂದ್ಯದಲ್ಲಿ ಕೇವಲ 16 ಎಸೆತಗಳಿಗೆ ಚೆಂಡು ಬದಲಾವಣೆ! - ಲೆದರ್​ ಬಾಲ್

ಪಂದ್ಯ 2.4 ಓವರ್​ನಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಭಾರತ ಯಾವುದೆ ವಿಕೆಟ್​ ನಷ್ಟವಿಲ್ಲದೆ 10 ರನ್ ​ಗಳಿಸಿತ್ತು. ಮಾರ್ಕ್​ವುಡ್​ ಎಸೆದ ಚೆಂಡನ್ನು ಧವನ್​ ಜೋರಾಗಿ ಬೌಂಡರಿ ಬಾರಿಸಿದಾಗ ಚೆಂಡು ಬೌಂಡರಿ ಲೈನ್​ನಲ್ಲಿ ಯಾವುದಾದರು ಬೋರ್ಡ್​ಗೆ ಬಡಿದೋ ಅಥವಾ ಮಾರ್ಕ್​ವುಡ್ 145.1 ಕಿ.ಮೀ. ವೇಗದಲ್ಲಿ ಚೆಂಡನ್ನು ಪಿಚ್​ನಲ್ಲಿ ಎಸೆದಾಗಲೋ ಚೆಂಡಿನ ಲೆದರ್​ ಹೊರಬಂದು ಸಣ್ಣ ರಂಧ್ರವಾಗಿದೆ. ಅಥವಾ ಇವರಿಬ್ಬರ ವೇಗಕ್ಕೆ ಚೆಂಡು ಒಡೆದಿರಬಹುದು ಎನ್ನಲಾಗುತ್ತಿದೆ.

ಭಾರತ vs  ಇಂಗ್ಲೆಂಡ್
ಶಿಖರ್ ಧವನ್

By

Published : Mar 23, 2021, 3:30 PM IST

ಪುಣೆ:ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಆರಂಭಿಕ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ವೇಗಿ ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ಮೊದಲ ಬೌಂಡರಿ ಬಾರಿಸಿದಾಗ ಚೆಂಡಿನ ಲೆದರ್​ ಹೊರಬಂದಿದ್ದು, ಕೇವಲ 16 ಎಸೆತಗಳಲ್ಲೇ ಚೆಂಡನ್ನು ಬದಲಾಯಿಸಿದ ಪ್ರಸಂಗ ನಡೆದಿದೆ.

ಪಂದ್ಯ 2.4 ಓವರ್​ನಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಭಾರತ ಯಾವುದೆ ವಿಕೆಟ್​ ನಷ್ಟವಿಲ್ಲದೆ 10 ರನ್ ​ಗಳಿಸಿತ್ತು. ಮಾರ್ಕ್​ವುಡ್​ ಎಸೆದ ಚೆಂಡನ್ನು ಧವನ್​ ಜೋರಾಗಿ ಬೌಂಡರಿ ಬಾರಿಸಿದಾಗ ಚೆಂಡು ಬೌಂಡರಿ ಲೈನ್​ನಲ್ಲಿ ಯಾವುದಾದರು ಬೋರ್ಡ್​ಗೆ ಬಡಿದೋ ಅಥವಾ ಮಾರ್ಕ್​ವುಡ್ 145.1 ಕಿ.ಮೀ. ವೇಗದಲ್ಲಿ ಚೆಂಡನ್ನು ಪಿಚ್​ನಲ್ಲಿ ಎಸೆದಾಗಲೋ ಚೆಂಡಿನ ಲೆದರ್​ ಹೊರಬಂದು ಸಣ್ಣ ರಂಧ್ರವಾಗಿದೆ. ಅಥವಾ ಇವರಿಬ್ಬರ ವೇಗಕ್ಕೆ ಚೆಂಡು ಒಡೆದಿರಬಹುದು ಎನ್ನಲಾಗುತ್ತಿದೆ.

ಇದನ್ನು ಓದಿ:ಇಂಗ್ಲೆಂಡ್ v/s ಭಾರತ ODI : ಸಚಿನ್, ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ಕಿಂಗ್‌ ಕೊಹ್ಲಿ

ತಕ್ಷಣ ಅಂಪೈರ್​ಗಳು ಹೊಸ ಚೆಂಡನ್ನು ಬದಲಾಯಿಸಿದ್ದಾರೆ. ಪಂದ್ಯದ ಮೊದಲ ಓವರ್​ನಲ್ಲೇ ಮಾರ್ಕ್​ವುಡ್​ 143ರ ವೇಗದಲ್ಲಿ 2 ಬಾರಿ ಚೆಂಡನ್ನು ಎಸೆದಿದ್ದರು. ಏಕದಿನ ಮತ್ತು ಟಿ-20 ಕ್ರಿಕೆಟ್​ನಲ್ಲಿ​ ಎಸ್​ಜಿ ಚೆಂಡನ್ನು ಬಳಸಲಾಗುತ್ತಿದೆ. ಏಕದಿನ ಪಂದ್ಯದ್ಲಲಿ ಒಂದು ಇನ್ನಿಂಗ್ಸ್​ಗೆ 2 ಹೊಸ ಚೆಂಡುಗಳನ್ನು ಬಳಸಲು ಅವಕಾಶವಿದೆ.

ABOUT THE AUTHOR

...view details