ಕರ್ನಾಟಕ

karnataka

ETV Bharat / sports

ಈಡನ್​ ಗಾರ್ಡನ್​ನಲ್ಲಿ ಹೊನಲು-ಬೆಳಕಿನ ಟೆಸ್ಟ್​ ಪಂದ್ಯಕ್ಕೆ ಟೈಮಿಂಗ್ಸ್​ ಫಿಕ್ಸ್ - ಭಾರತ-ಬಾಂಗ್ಲದೇಶ ಮೊದಲ ಟೆಸ್ಟ್​

ಈಡನ್​ ಗಾರ್ಡನ್​ನಲ್ಲಿ ನವೆಂಬರ್​ 22 ರಿಂದ 26 ರವರೆಗೆ ಏಷ್ಯಾದಲ್ಲೇ ಮೊದಲ ಬಾರಿಗೆ ಪಿಂಕ್​ ಬಾಲ್​ನಲ್ಲಿ ಹೊನಲು-ಬೆಳಕಿನ ಪಂದ್ಯ ನಡೆಯಲಿದ್ದು, ಪಂದ್ಯದ ಸಮಯವನ್ನು ಮಧ್ಯಾಹ್ನ 1ರಿಂದ ರಾತ್ರಿ 8 ಗಂಟೆವರೆಗೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.

IND vs BAN Day-Night Test

By

Published : Nov 13, 2019, 2:19 PM IST

ಕೋಲ್ಕತ್ತಾ: ಈಡನ್​ ಗಾರ್ಡನ್​ನಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಐತಿಹಾಸಿಕ ಹೊನಲು-ಬೆಳಕು(ಹಗಲು-ರಾತ್ರಿ) ಟೆಸ್ಟ್​​ ಪಂದ್ಯದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ನವೆಂಬರ್​ 22 ರಿಂದ 26 ರವರೆಗೆ ಏಷ್ಯಾದಲ್ಲೇ ಮೊದಲ ಬಾರಿಗೆ ಪಿಂಕ್ ​ಬಾಲ್​ನಲ್ಲಿ ಹಗಲು ರಾತ್ರಿ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯವನ್ನು ಮೊದಲು ಮದ್ಯಾಹ್ನ 2:30 ಕ್ಕೆ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಆದ್ರೆ ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ ವೀಕ್ಷಕರಿಗೆ ಪಂದ್ಯ ಮುಗಿಸಿಕೊಂಡು ಮನೆಗೆ ತೆರಳಲು ತೊಂದರೆಯಾಗುತ್ತದೆ ಎಂದು ಬೇಗ ಆರಂಭಿಸಲು ಬಿಸಿಸಿಐಗೆ ಮನವಿ ಮಾಡಿತ್ತು.

ಇದೀಗ ಬಿಸಿಎ ಮನವಿಗೆ ಸ್ಪಂದಿಸಿರುವ ಬಿಸಿಸಿಐ ಪಂದ್ಯವನ್ನು ಮಧ್ಯಾಹ್ನ 1 ಗಂಟೆಗೆ ಆರಂಭಿಸಲು ನಿರ್ಧರಿಸಿದೆ. ಅಲ್ಲದೆ 8 ಗಂಟೆಗೆ ಹಿಮ ಬೀಳಲು ಶುರುವಾಗುತ್ತದೆ. ಈ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಸಮಯ ನಿಗದಿ ಮಾಡಿದೆ.

ಬಿಸಿಸಿಐ ಮೂಲಗಳ ಪ್ರಕಾರ ಪಂದ್ಯ 1 ಗಂಟೆಗೆ ಆರಂಭವಾಗಲಿದೆ. ಮೊದಲ ಸೆಷನ್​ 3 ಗಂಟೆಗೆ ಮುಗಿಯಲಿದ್ದು, ಈ ವೇಳೆ 40 ನಿಷಗಳ ಬ್ರೇಕ್​ ನಿಗದಿಪಡಿಸಿಲಾಗಿದೆ. ಎರಡನೇ ಸೆಷನ್​ 3:40ಕ್ಕೆ ಆರಂಭವಾಗಿ 5:40 ಕ್ಕೆ ಮುಗಿಯಲಿದೆ. ಮತ್ತೆ 20 ನಿಮಿಷ ಬ್ರೇಕ್​ ನೀಡಲಾಗಿದೆ. ಆಂತಿಮ ಸೆಷನ್​ 6 ಗಂಟೆಗೆ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ.

ABOUT THE AUTHOR

...view details