ಕರ್ನಾಟಕ

karnataka

ETV Bharat / sports

ಫೀಲ್ಡಿಂಗ್​ ವೇಳೆ ಗಾಯ.. ಮೈದಾನದಿಂದ ಹೊರ ನಡೆದ ಡೇವಿಡ್ ವಾರ್ನರ್ - ಡೇವಿಡ್ ವಾರ್ನರ್​ಗೆ ಗಾಯ

ಸಿಡ್ನಿಯಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದಾರೆ..

Warner to undergo scan for groin injury
ಮೈದಾನದಿಂದ ಹೊರ ನಡೆದ ಡೇವಿಡ್ ವಾರ್ನರ್

By

Published : Nov 29, 2020, 3:19 PM IST

ಸಿಡ್ನಿ (ಆಸ್ಟ್ರೇಲಿಯಾ) :ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ತೊಡೆಸಂದು ಗಾಯದಿಂದಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮೈದಾನದಿಂದ ಹೊರ ನಡೆದಿದ್ದಾರೆ.

ಭಾರತದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ಅಲ್ಲೇ ಇದ್ದ ವಾರ್ನರ್ ಚೆಂಡನ್ನು ತಡೆಯಲು ಡೈವ್ ಮಾಡಿದ್ರು, ಈ ವೇಳೆ ತೊಡೆಸಂದು ನೋವಿಗೆ ತುತ್ತಾಗಿದ್ದಾರೆ.

ಮತ್ತೆ ಅಬ್ಬರಿಸಿದ ಆಸೀಸ್ ಬ್ಯಾಟ್ಸ್​ಮನ್​ಗಳು: ಭಾರತಕ್ಕೆ 390 ರನ್​ಗಳ ಬೃಹತ್ ಟಾರ್ಗೆಟ್

ಕೂಡಲೇ ಮೈದಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಫಿಸಿಯೋ, ವಾರ್ನರ್​ ಅವರನ್ನು ಕರೆದೊಯ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು, ಸ್ಕ್ಯಾನ್​ ನಡೆಸಿದ ನಂತರ ಗಾಯದ ಬಗ್ಗೆ ಮಾಹಿತಿ ತಿಳಿಯಲಿದೆ ಎಂದಿದ್ದಾರೆ.

ABOUT THE AUTHOR

...view details