ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ತಮ್ಮ ಜೊತೆ ಪಂದ್ಯವನ್ನು ಉಳಿಸುವ 62 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗಿ 161 ಎಸೆತಗಳಲ್ಲಿ ಅಜೇಯ 23 ರನ್ಗಳಿಸಿದ ಹನುಮ ವಿಹಾರಿ ಆಟವನ್ನು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶತಕಕ್ಕೆ ಹೋಲಿಕೆ ಮಾಡಿದ್ದಾರೆ.
ಅಶ್ವಿನ್ ಈ ಪಂದ್ಯದಲ್ಲಿ 128 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದರಲ್ಲದೆ, ವಿಹಾರಿ ಜೊತೆ ಸೇರಿ ಐದನೇ ದಿನ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯ ಡ್ರಾನಲ್ಲಿ ಅಂತ್ಯಗೊಳ್ಳುವಂತೆ ಮಾಡಿದರು. ವಿಹಾರಿ ಹ್ಯಾಮ್ಸ್ಟ್ರಿಂಗ್ಗೆ ಒಳಗಾದರೂ ಲೆಕ್ಕಿಸದೆ ಐದನೇ ದಿನದಂತ್ಯದವರೆಗೂ ಬ್ಯಾಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.