ಕರ್ನಾಟಕ

karnataka

ETV Bharat / sports

ರೋಹಿತ್ ಗಾಯದ ಬಗ್ಗೆ ಮಾಹಿತಿ ನೀಡಿದ ವಿರಾಟ್.. ಕಣಕ್ಕಿಳಿಯುವ ಬಗ್ಗೆ ಡಿ. 11ರಂದು ನಿರ್ಧಾರ - ರೋಹಿತ್ ಶರ್ಮಾ ಲೇಟೆಸ್ಟ್ ನ್ಯೂಸ್

ಡಿಸೆಂಬರ್ 11ರಂದು ಮೌಲ್ಯಮಾಪನ ನಡಿಸಿದ ಬಳಿಕವಷ್ಟೇ ರೋಹಿತ್ ಆಸೀಸ್ ವಿರುದ್ಧ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.

Rohit will be further assessed on December 11, says Kohli
ರೋಹಿತ್ ಶರ್ಮಾ

By

Published : Nov 26, 2020, 8:07 PM IST

ಸಿಡ್ನಿ (ಆಸ್ಟ್ರೇಲಿಯಾ): ಡಿಸೆಂಬರ್ 11ರಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಶರ್ಮಾ ಅವರ ಗಾಯವನ್ನು ಮತ್ತಷ್ಟು ನಿರ್ಣಯಿಸಲಾಗುವುದು ಎಂದು ವಿರಾಟ್ ಕೊಹ್ಲಿ ಮಾಹಿತಿ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಆಯ್ಕೆ ಸಭೆಗೂ ಮೊದಲು ರೋಹಿತ್‌ಗೆ ಎರಡು ವಾರಗಳ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ನಾವು ದುಬೈನಲ್ಲಿ ಆಯ್ಕೆ ಸಭೆ ನಡೆಸುವ ಎರಡು ದಿನಗಳ ಮೊದಲು ನಮಗೆ ಮೇಲ್ ಬಂತು. ಐಪಿಎಲ್ ಸಮಯದಲ್ಲಿ ರೋಹಿತ್ ಅವರು ಗಾಯಗೊಂಡಿರುವುದರಿಂದ ಅವರು ಆಯ್ಕೆಗೆ ಲಭ್ಯವಿಲ್ಲ ಎಂದು ಹೇಳಿದ್ದರು. ಎರಡು ವಾರಗಳ ವಿಶ್ರಾಂತಿ ಮತ್ತು ಪುನರ್ವಸತಿ ಅವಧಿಯನ್ನು ಉಲ್ಲೇಖಿಸಿಲಾಗಿತ್ತು ಮತ್ತು ಗಾಯದ ಸಾಧಕ-ಬಾಧಕಗಳನ್ನು ರೋಹಿತ್‌ಗೆ ವಿವರಿಸಲಾಗಿದೆ ಮತ್ತು ಈ ಬಗ್ಗೆ ಅವರೂ ಅರ್ಥ ಮಾಡಿಕೊಂಡಿದ್ದಾರೆ" ಇದು ನಮಗೆ ಮೇಲ್ ಮೂಲಕ ದೊರೆತ ಮಾಹಿತಿಯಾಗಿದೆ.

ರೋಹಿತ್, ಇಶಾಂತ್ ಆಸ್ಟ್ರೇಲಿಯಾಕ್ಕೆ ಬಂದರೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ: ಕೊಹ್ಲಿ

"ಆದರೆ ಅವರು ಐಪಿಎಲ್‌ನಲ್ಲಿ ಮೈದಾನಕ್ಕೆ ಇಳಿದಿದ್ದರು. ನಾವೆಲ್ಲರೂ ರೋಹಿತ್ ಆಸ್ಟ್ರೇಲಿಯಾಕ್ಕೆ ಆಗಮಿಸುತ್ತಾರೆ ಎಂದು ಭಾವಿಸಿದ್ದೆವು. ಅವರು ಆಸ್ಟ್ರೇಲಿಯಾಕ್ಕೆ ಏಕೆ ಬರಲಿಲ್ಲ ಎಂಬ ಕಾರಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ" ಎಂದು ಕೊಹ್ಲಿ ಹೇಳಿದ್ದಾರೆ.

ನಾಳೆ ನಡೆಯುವ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಭಾರತ-ಆಸೀಸ್ ಆಟಗಾರರು

"ಅದರ ನಂತರ ಮೇಲ್​ನಲ್ಲಿ ನಮಗೆ ದೊರೆತ ಏಕೈಕ ಮಾಹಿತಿಯೆಂದರೆ ಅವರು ಎನ್‌ಸಿಎಯಲ್ಲಿದ್ದಾರೆ ಮತ್ತು ಅವರನ್ನು ಡಿಸೆಂಬರ್ 11ರಂದು ಮತ್ತಷ್ಟು ಮೌಲ್ಯಮಾಪನ ಮಾಡಲಾಗುತ್ತದೆ. ಇದಿಷ್ಟು ಆಯ್ಕೆ ಸಮಿತಿ ಸಭೆಯಿಂದ ಇತ್ತೀಚೆಗೆ ಬಂದ ಮೇಲ್​ನಲ್ಲಿನ ಮಾಹಿತಿಯಾಗಿದೆ ಎಂದಿದ್ದಾರೆ.

ಡಿಸೆಂಬರ್ 11ರಂದು ಮೌಲ್ಯಮಾಪನ ನಡಿಸಿದ ಬಳಿಕವಷ್ಟೆ ರೋಹಿತ್ ಆಸೀಸ್ ವಿರುದ್ಧ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.

ABOUT THE AUTHOR

...view details