ಬ್ರಿಸ್ಬೇನ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಕೊನೆಯ ಸೆಷನ್ ವರುಣನ ಉಪಟಳಕ್ಕೆ ಬಲಿಯಾಗಿದೆ.
ಆಸ್ಟ್ರೇಲಿಯಾ ತಂಡ 294 ರನ್ಗಳಿಗೆ ಆಲೌಟ್ ಆದ ಪರಿಣಾಮ 328 ರನ್ಗಳ ಗುರಿ ಪಡೆದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ರು.
ಕೇವಲ 1.5 ಓವರ್ ಬೌಲಿಂಗ್ನ ನಂತರ ಮಳೆ ಸುರಿಯಲು ಪ್ರಾರಂಭವಾದ ಕಾರಣ ನಾಲ್ಕನೇ ದಿನದಾಟ ಮುಕ್ತಾಯವಾಗಿದೆ ಭಾರತ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದ್ದು ಸರಣಿ ಗೆಲ್ಲಲು ಇನ್ನೂ 324 ರನ್ಗಳ ಅವಶ್ಯಕತೆ ಇದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ನಲ್ಲಿ 369 ರನ್ ಗಳಿಸಿದ್ರೆ, ಭಾರತ 336 ರನ್ಗಳಿಗೆ ಆಲೌಟ್ ಆಗಿ 33 ರನ್ಗಳ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 294 ರನ್ ಗಳಿಸಿದೆ. ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು, ನಾಲ್ಕನೇ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಲು ವಿಫಲವಾದರೆ ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲೇ ಉಳಿಸಿಕೊಳ್ಳಲಿದೆ.