ಕರ್ನಾಟಕ

karnataka

ETV Bharat / sports

ಪಂತ್ ವಿಶ್ವದ​ ಇತರೆ ಕೀಪರ್​ಗಳಿಗಿಂತ ಹೆಚ್ಚು ಕ್ಯಾಚ್​ ಕೈಚೆಲ್ಲಿದ್ದಾರೆ: ರಿಕ್ಕಿ ಪಾಂಟಿಂಗ್ - ಡೆಲ್ಲಿ ಕ್ಯಾಪಿಟಲ್​ ಕೋಚ್​

ಮೂರನೇ ಟೆಸ್ಟ್​ನಲ್ಲಿ ಪಂತ್ ಕೇವಲ ಮೂರು ಓವರ್​ಗಳ ಅಂತರದಲ್ಲಿ ವಿಲ್ ಪುಕೋವ್​ಸ್ಕಿ ಅವರ ಎರಡು ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಪಾಂಟಿಂಗ್ ಅಸಮಾಧಾನಕ್ಕೆ ಕಾರಣವಾಗಿದೆ.

ರಿಕಿ ಪಾಂಟಿಂಗ್​
ರಿಕಿ ಪಾಂಟಿಂಗ್​

By

Published : Jan 7, 2021, 10:51 PM IST

ಸಿಡ್ನಿ:ಮೊದಲ ಟೆಸ್ಟ್​ನ ನಂತರ ಭಾರತ ಟೆಸ್ಟ್​ ತಂಡದಲ್ಲಿ ರಿಷಭ್ ಪಂತ್ ಆಡಬೇಕೆಂದು ಕರೆ ನೀಡಿದ್ದ ರಿಕಿ ಪಾಂಟಿಂಗ್, ಅವರ ವಿಕೆಟ್​ ಕೀಪಿಂಗ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೂರನೇ ಟೆಸ್ಟ್​ನಲ್ಲಿ ಪಂತ್ ಕೇವಲ ಮೂರು ಓವರ್​ಗಳ ಅಂತರದಲ್ಲಿ ವಿಲ್ ಪುಕೋವ್​ಸ್ಕಿ ಅವರ ಎರಡು ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಪಾಂಟಿಂಗ್ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲು ಅಶ್ವಿನ್​ ಬೌಲಿಂಗ್​ನಲ್ಲಿ ಔಟ್​ಸೈಡ್​ ಆದ ಚೆಂಡು ಹಿಡಿಯುವಲ್ಲಿ ವಿಫಲರಾಗಿದ್ದ ಪಂತ್, ನಂತರ ವೇಗಿ ಸಿರಾಜ್ ಬೌಲಿಂಗ್​ನಲ್ಲೂ ಸುಲಭ ಕ್ಯಾಚ್​ ಕೈಚೆಲ್ಲಿದರು. ಇದರಿಂದ ಭಾರತೀಯ ಹಿರಿಯ ಕ್ರಿಕೆಟಿಗರು, ಅಭಿಮಾನಿಗಳು ಪಂತ್​ ಕೀಪಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ ಕೋಚ್ ಆಗಿರುವ ರಿಕಿ ಪಾಂಟಿಂಗ್ ಕೂಡ ಪಂತ್ ವಿಕೆಟ್​ ಕೀಪಿಂಗ್ ​ಬಗ್ಗೆ ಬೇಸರದ ಮಾತನಾಡಿದ್ದಾರೆ.

ಪಂತ್ ಒಂದೇ ದಿನ ಎರಡು ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಅವರು ಕೈಚೆಲ್ಲಿದ ಕ್ಯಾಚ್​ಗಳು ಅಂತಹ ಕಠಿಣವೇನೂ ಆಗಿರಲಿಲ್ಲ. ಪಂತ್ ಅದೃಷ್ಟವೆಂದರೆ, ಪುಕೊವ್​ಸ್ಕಿ ಸಿಕ್ಕ ಅವಕಾಶದಿಂದ ದೊಡ್ಡ ಸ್ಕೋರ್ ಮಾಡಲಿಲ್ಲ. ಒಂದು ವೇಳೆ ಅವರು ಶತಕ, ದ್ವಿಶತಕ ಬಾರಿಸಿದ್ದರೆ, ಪಂತ್ ತಮ್ಮನ್ನು ತಾವು ದೂಷಿಸಿಕೊಳ್ಳಲೇ ಬೇಕಾಗಿತ್ತು ಎಂದು ಕ್ರಿಕೆಟ್ ಡಾಟ್​ಕಾಮ್​ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ​

ನಾನು ಬಹಳ ದೀರ್ಘ ಸಮಯದಿಂದೂಲೂ ಬ್ಯಾಟಿಂಗ್​ಗಿಂತ ರಿಷಭ್ ವಿಕೆಟ್​ ಕೀಪಿಂಗ್​ನಲ್ಲಿ ಸುಧಾರಣೆಯಾಗಬೇಕೆಂದು ಹೇಳುತ್ತಿದ್ದೇನೆ. ಅವರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಗಮನಿಸಿದರೆ, ವಿಶ್ವದ ಇತರ ಕೀಪರ್‌ಗಳಿಗಿಂತ ಹೆಚ್ಚಿನ ಕ್ಯಾಚ್‌ಗಳನ್ನು ಕೈಬಿಟ್ಟಿರುವ ವಿಕೆಟ್​ ಕೀಪರ್​ ಆಗಿದ್ದಾರೆ. ಹಾಗಾಗಿ ಅವರು ವಿಕೆಟ್​ ಕೀಪಿಂಗ್​ ಮೇಲೆ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಪಾಂಟಿಗ್ ಹೇಳಿದ್ದಾರೆ.

ಇದನ್ನು ಓದಿ:ಅವರೇ ನನಗೆ ಮಾದರಿ, ಅವರಂತಾಗಬೇಕು ಅನ್ನೋದೇ ನನ್ನ ಕನಸು: ಚಹಾಲ್

ABOUT THE AUTHOR

...view details