ಕರ್ನಾಟಕ

karnataka

By

Published : Jan 9, 2021, 11:31 AM IST

ETV Bharat / sports

ಅಂಪೈರ್ ವಿರುದ್ಧ ಆಸೀಸ್ ನಾಯಕ ಅಸಮಾಧಾನ: ದಂಡ ವಿಧಿಸುವ ಸಾಧ್ಯತೆ

ಆಸೀಸ್ ನಾಯಕ ಟಿಮ್ ಪೇನ್ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರಣ ದಂಡ ವಿಧಿಸುವ ಸಾಧ್ಯತೆ ಇದೆ.

Paine loses cool after unsuccessful review
ಅಂಪೈರ್ ವಿರುದ್ಧ ಆಸೀಸ್ ನಾಯಕ ಅಸಮಾಧಾನ

ಸಿಡ್ನಿ: ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಡಿಆರ್​ಎಸ್​​ ಮನವಿಯಲ್ಲಿ ತಮ್ಮ ಪರ ಫಲಿತಾಂಶ ಬಾರದಿದ್ದ ಸಮಯದಲ್ಲಿ ಆಸೀಸ್ ನಾಯಕ ಟಿಮ್ ಪೇನ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಥನ್ ಲಿಯಾನ್ ಬೌಲಿಂಗ್​ ವೇಳೆ ಈ ಘಟನೆ ನಡೆದಿದೆ. ವೇಡ್ ಹಿಡಿದ ಕ್ಯಾಚ್​ಗೆ ಚೇತೇಶ್ವರ್ ಪೂಜಾರ ಔಟ್ ಆಗಿದ್ದಾರೆ ಎಂದು ಆಸೀಸ್ ಆಟಗಾರರು ಬಲವಾದ ಮನವಿ ಮಾಡಿದ್ರು. ಆದ್ರೆ ಆನ್​-ಫೀಲ್ಡ್ ಅಂಪೈರ್ ಮನವಿಯನ್ನು ತಿರಸ್ಕರಿಸಿದ್ರು.

ಆತಿಥೇಯರು ಈ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದರು. ಮೂರನೇ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್, ಯಾವುದೇ ನಿರ್ಣಾಯಕ ಪುರಾವೆಗಳು ಸಿಗದ ಕಾರಣ ಅಂಪೈರ್ಸ್ ಕಾಲ್​ನಿಂದಾಗಿ ನಾಟ್​ಔಟ್ ಎಂದು ಘೋಷಿಸಿದ್ರು.

ಈ ವೇಳೆ ಪೇನ್ ತಾಳ್ಮೆ ಕಳೆದುಕೊಂಡು ಆನ್​-ಫೀಲ್ಡ್ ಅಂಪೈರ್​ ವಿಲ್ಸನ್ ಜೊತೆ ವಾದಕ್ಕಿಳಿದರು. ಮೂರನೇ ಅಂಪೈರ್ ಕೇವಲ ಲೆಗ್-ಸೈಡ್ ನೋಡುವುದಕ್ಕಿಂತ ಹೆಚ್ಚಾಗಿ ಆಫ್-ಸೈಡ್ ಹಾಟ್ ಸ್ಪಾಟ್ ಅನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಪೇನ್ ಹೇಳಿರುವುದು ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್ ಆಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಮೂರನೇ ಅಂಪೈರ್ ತೀರ್ಮಾನ ನೀಡಿ ಆಗಿದೆ, ನೀನು ನನಗೇನು ಹೇಳಬೇಡ ಎಂದು ಅಂಪೈರ್ ಪೇನ್​ಗೆ ಹೇಳುತ್ತಿರುವುದನ್ನು ಕೂಡ ಕೇಳಬಹುದಾಗಿದೆ.

ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರದಲ್ಲಿ ಭಿನ್ನಾಭಿಪ್ರಾಯವನ್ನು ತೋರಿಸುವುದಕ್ಕೆ ಸಂಬಂಧಿಸಿದಂತೆ. ಪೇನ್ ಅವರ ವರ್ತನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನ ನೀತಿ ಸಂಹಿತೆಯ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ.

ABOUT THE AUTHOR

...view details