ಕರ್ನಾಟಕ

karnataka

ETV Bharat / sports

ಪೆವಿಲಿಯನ್ ಸೇರಿದ ಗಿಲ್, ರೋಹಿತ್ ಶರ್ಮಾ: ಮಳೆಯಿಂದ ಮೂರನೇ ಸೆಷನ್ ರದ್ದು

ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಕಾರಣ ದ್ವಿತೀಯ ದಿನದಾಟ ಮುಕ್ತಾಯವಾಗಿದ್ದು, ಈ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ. ಪುಜಾರ 8 ಮತ್ತು ರಹಾನೆ 2 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

India vs Australia 4th Test
ಮೂರನೇ ಸೆಷನ್​ಗೆ ವರುಣ ಅಡ್ಡಿ

By

Published : Jan 16, 2021, 11:40 AM IST

Updated : Jan 16, 2021, 12:45 PM IST

ಬ್ರಿಸ್ಬೇನ್:ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಮೂರನೇ ಸೆಷನ್​ಗೆ ವರುಣ ಅಡ್ಡಿಪಡಿಸಿದ ಕಾರಣ ದ್ವಿತೀಯ ದಿನದಾಟ ಮುಕ್ತಾಯಗೊಂಡಿದ್ದು, ಭಾರತ 307 ರನ್​ಗಳ ಹಿನ್ನಡೆ ಅನುಭವಿಸಿದೆ.

ಆಸ್ಟ್ರೇಲಿಯಾ 369 ರನ್​ಗಳಿಗೆ ಆಲ್​ಔಟ್ ಆದ ನಂತರ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ಗಿಲ್ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದ್ರು. ಶುಬ್ಮನ್ ಗಿಲ್ ಕೇವಲ 7 ರನ್ ಗಳಿಸಿ ಕಮ್ಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಜೊತೆಯಾದ ರೋಹಿತ್ ಮತ್ತು ಪುಜಾರ ಜೋಡಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ್ರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ರೋಹಿತ್ ಬೌಂಡರಿಗಳನ್ನು ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. ಆದರೆ ಲಿಯಾನ್ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಾರ್ಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.

ಎರಡನೇ ದಿನದ ದ್ವಿತೀಯ ಸೆಷನ್ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದ್ದು, ಪೂಜಾರ 8 ಮತ್ತು ರಹಾನೆ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಳೆಯ ಕಾರಣದಿಂದ ಎರಡನೇ ದದಿನದಾಟವನ್ನು ರದ್ದುಗೊಳಿಸಲಾಗಿದೆ.

ಲಾಬುಶೇನ್ ಶತಕ ಮತ್ತು ನಾಯಕ ಟಿಮ್ ಪೇನ್ ಅರ್ಧಶತಕ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಗೆ ಆಲೌಟ್ ಆಗಿದೆ.

Last Updated : Jan 16, 2021, 12:45 PM IST

ABOUT THE AUTHOR

...view details