ಕರ್ನಾಟಕ

karnataka

ETV Bharat / sports

ಸೋಲಿನ ಸುಳಿಯಲ್ಲಿರುವ ಭಾರತಕ್ಕೆ ಮತ್ತೊಂದು ಆಘಾತ: ಗಾಯಾಳು ಜಡೇಜಾ 4ನೇ ಟೆಸ್ಟ್​ನಿಂದ ಔಟ್​

ಸಿಡ್ನಿ ಟೆಸ್ಟ್​ನಲ್ಲಿ ಮೂರನೇ ದಿನ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಚೆಂಡು ಹೆಬ್ಬರಳಿಗೆ ಬಿದ್ದಿತ್ತು. ತಕ್ಷಣ ಫಿಸಿಯೋ ಬಂದು ಚಿಕಿತ್ಸೆ ನೀಡಿದ ನಂತರ ಬ್ಯಾಟಿಂಗ್ ಮುಂದುವರಿಸಿ ಅಜೇಯ 28 ರನ್​ಗಳಿಸಿದ್ದರು. ಇನ್ನಿಂಗ್ಸ್​ ಮುಕ್ತಾಯದ ನಂತರ ಸ್ಕಾನ್ ಮಾಡಿಸಿದ್ದು, ಅವರ ಬೆರಳಿನ ಮೂಳೆ ಜರುಗಿದ್ದು, ಮುರಿದಿದೆ ಎಂದು ತಿಳಿದು ಬಂದಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ರವೀಂದ್ರ ಜಡೇಜಾ ಗಾಯ

By

Published : Jan 9, 2021, 7:28 PM IST

ಸಿಡ್ನಿ: ಶನಿವಾರ 3ನೇ ಟೆಸ್ಟ್​ ವೇಳೆ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಹಿರಿಯ ಆಲ್​ರೌಂಡರ್​ ರವೀಂದ್ರ ಜಡೇಜಾಗೆ ಹೆಬ್ಬರಳಿನ ಮೂಳೆ ಮುರಿದಿರುವುದು ಖಚಿತವಾಗಿದ್ದು, ಬ್ರಿಸ್ಬೇನ್​ನಲ್ಲಿ ನಡೆಯಲಿರುವ 4ನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ.

ಸಿಡ್ನಿ ಟೆಸ್ಟ್​ನಲ್ಲಿ ಮೂರನೇ ದಿನ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಚೆಂಡು ಹೆಬ್ಬರಳಿಗೆ ಬಿದ್ದಿತ್ತು. ತಕ್ಷಣ ಫಿಸಿಯೋ ಬಂದು ಚಿಕಿತ್ಸೆ ನೀಡಿದ ನಂತರ ಬ್ಯಾಟಿಂಗ್ ಮುಂದುವರಿಸಿ ಅಜೇಯ 28 ರನ್​ಗಳಿಸಿದ್ದರು. ಇನ್ನಿಂಗ್ಸ್​ ಮುಕ್ತಾಯದ ನಂತರ ಸ್ಕ್ಯಾನ್ ಮಾಡಿಸಿದ್ದು, ಅವರ ಬೆರಳಿನ ಮೂಳೆ ಜರುಗಿದ್ದು, ಮುರಿದಿದೆ ಎಂದು ತಿಳಿದು ಬಂದಿದೆ.

ರವೀಂದ್ರ ಜಡೇಜಾ ಅವರಿಗೆ ಎಡಗೈ ಹೆಬ್ಬೆರಳಿನ ಮೂಳೆ ಮುರಿದಿದ್ದು, ಅವರಿಗೆ ಗ್ಲೌಸ್​ ತೊಡುವುದು ಮತ್ತು ಬ್ಯಾಟ್​ ಹಿಡಿಯುವುದು ತುಂಬಾ ಕಷ್ಟವಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಶನಿವಾರ ಸ್ಕ್ಯಾನ್​ ವರದಿ ಬಂದ ನಂತರ ತಿಳಿಸಿದ್ದಾರೆ.

ಜಡೇಜಾಗೆ ಕಡಿಮೆಯೆಂದೂ ಆರು ವಾರಗಳ ಕಾಲ ಮೈದಾನದಿಂದ ದೂರ ಉಳಿಯಲಿದ್ದಾರೆ. ಹಾಗಾಗಿ ಅವರು ಜನವರಿ 15ರಿಂದ ನಡೆಯುವ ಅಂತಿಮ ಟೆಸ್ಟ್​ನಲ್ಲಿ ಹೊರಗುಳಿಯಬೇಕಾಗಿದೆ. ಆದರೆ, ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ರಿಷಭ್ ಪಂತ್​ ಅವರ ಗಾಯ ಗಂಭೀರವಾಗಿಲ್ಲದ ಕಾರಣ ಅವರು 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ.​ ​

ಪಂತ್ ಕೂಡ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಪ್ಯಾಟ್ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಮೊಣಕೈಗೆ ಚೆಂಡು ಬಡಿದು ಗಾಯಗೊಂಡಿದ್ದರು. ಅವರನ್ನು ಕೂಡ ಸ್ಕ್ಯಾನ್​ಗೆ ಒಳಪಡಿಸಲಾಗಿತ್ತು.

ಇದನ್ನು ಓದಿ:ಪೂಜಾರ ವಿರುದ್ಧ ಸಾಧ್ಯವಾದಷ್ಟು ಕಠಿಣವಾಗಲು ಬಯಸಿದ್ದೇವೆ: ಪ್ಯಾಟ್​ ಕಮಿನ್ಸ್​

ABOUT THE AUTHOR

...view details