ಕರ್ನಾಟಕ

karnataka

ETV Bharat / sports

ಪಂತ್ ತಲೆಗೆ ಬಡಿದ ಚೆಂಡು: ಗಾಯಾಳು ರಿಷಬ್​ ಮೇಲೆ ವೈದ್ಯರಿಂದ ನಿಗಾ! - ಗಯಾಳು ರಿಷಬ್ ಪಂತ್

ಆಸಿಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ವಿಕೆಟ್ ಕೀಪರ್ ರಿಷಭ್​ ಪಂತ್ ಮೇಲೆ ವೈದ್ಯರು ನಿಗಾ ಇರಿಸಿದ್ದು, ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಬಿಸಿಸಿಐ ಹೇಳಿದೆ.

Injured Rishabh Pant under observation,ಪಂತ್ ತಲೆಗೆ ಬಡಿದ ಚೆಂಡು
ಪಂತ್ ತಲೆಗೆ ಬಡಿದ ಚೆಂಡು

By

Published : Jan 15, 2020, 8:03 AM IST

ಮುಂಬೈ:ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ವಿಕೆಟ್ ಕೀಪರ್ ರಿಷಭ್​ ಪಂತ್ ಮೇಲೆ ವೈದ್ಯರು ನಿಗಾ ಇರಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ 28 ರನ್ ​ಗಳಿಸಿದ್ದ ವೇಳೆ ಆಸೀಸ್​ ವೇಗಿ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್​ ಸೇರಿಕೊಂಡರು. ಈ ವೇಳೆ ಆಸ್ಟ್ರೇಲಿಯಾ ಬೌಲರ್​ ಎಸೆದ ಚೆಂಡು ರಿಷಬ್ ಬ್ಯಾಟ್​ಗೆ ತಾಗಿದ ನಂತರ ಹೆಲ್ಮೆಟ್​ಗೆ ಬಡಿದ ಕಾರಣ ಅವರು ಅರೆಪ್ರಜ್ಞಾವಸ್ಥೆ ತಲುಪಿದ್ದರು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಕೆ.ಎಲ್.ರಾಹುಲ್ ನಿರ್ವಹಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ. ರಿಷಭ್​ ಪಂತ್ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ. ರಾತ್ರಿಯಿಡೀ ಅವರ ಆರೋಗ್ಯ ಸ್ಥಿತಿ ಬಗ್ಗೆ ಗಮನ ಹರಿಸಲಾಗಿತ್ತು. ನುರಿತ ವೈದ್ಯರ ತಂಡ ಪಂತ್​ರನ್ನ ಭೇಟಿ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಸೋಲಿಸದ ಆಸೀಸ್​ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ABOUT THE AUTHOR

...view details