ಬೆಂಗಳೂರು:ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಫೀಲ್ಡಿಂಗ್ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದು ಕೊಹ್ಲಿ ಪಡೆಗೆ ಆಘಾತ ನೀಡಿದೆ.
ಫೀಲ್ಡಿಂಗ್ ವೇಳೆ ಧವನ್ಗೆ ಗಾಯ, ಬ್ಯಾಟಿಂಗ್ಗೆ ಬರುವುದೇ ಡೌಟ್... ಆತಂಕದಲ್ಲಿ ಟೀಮ್ ಇಂಡಿಯಾ - ಆಸ್ಟ್ರೇಲಿಯಾ-ಭಾರತ ಏಕದಿನ ಸರಣಿ
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದರು.

Ind vs Aus: Dhawan injury
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದರು.
ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಚೆಂಡು ಪಕ್ಕೆಲುಬಿಗೆ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆಯಷ್ಟೇ ಶಿಖರ್ ಧವನ್ ಆಡುವ ಬಳಗದಲ್ಲಿ ಇರಲಿದ್ದಾರೆ ಎಂಬುದು ಖಚಿತವಾಗಿತ್ತು. ಇದೀಗ ಮತ್ತೆ ಧವನ್ ಭುಜದ ಗಾಯಕ್ಕೊಳಗಾಗಿರುವುದು ಕೊಹ್ಲಿ ಬಳಗದ ಚಿಂತೆಗೆ ಕಾರಣವಾಗಿದೆ.