ಬ್ರಿಸ್ಬೇನ್(ಆಸ್ಟ್ರೇಲಿಯಾ): ಆಸೀಸ್ ನಾಯಕ ಟಿಮ್ ಪೇನ್ ವರ್ತನೆಗೆ ಗವಾಸ್ಕರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೇನ್, ಸುನೀಲ್ ಗವಾಸ್ಕರ್ ಅವರು ಅಭಿಪ್ರಾಯಕ್ಕೆ ವ್ಯಕ್ತಪಡಿಲು ಅರ್ಹರು. ಆದರೆ, ಇದು ಆಸ್ಟ್ರೇಲಿಯಾ ತಂಡದ ಮೇಲೆ ಸ್ವಲ್ಪವೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಡ್ರಾ ಆಗಿ ಕೊನೆಗೊಳ್ಳುತ್ತಿದ್ದಂತೆ, ಸುನೀಲ್ ಗವಾಸ್ಕರ್ ಅವರು ಪೇನ್‌ರನ್ನು ಬಹಿರಂಗವಾಗಿ ಟೀಕಿಸಿದ್ದರು ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟೆಸ್ಟ್ ನಾಯಕನಾಗಿ ತಮ್ಮ ಕಡೆಯ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಸಿದ್ದ ಪೇನ್ "ನಾನು ಅದರಲ್ಲಿ ಪ್ರವೇಶಿಸಲು ಹೋಗುತ್ತಿಲ್ಲ. ಅವರ ಅಭಿಪ್ರಾಯಕ್ಕೆ ಅವರು ಅರ್ಹನಾಗಿರುತ್ತಾರೆ, ಅದು ನಮ್ಮ ಮೇಲೆ ಸ್ವಲ್ಪವೂ ಪರಿಣಾಮ ಬೀರುವುದಿಲ್ಲ, ಸನ್ನಿ ಅವರು ಏನು ಹೇಳಬೇಕೆಂದು ಬಯಸುತ್ತಾರೋ ಅದನ್ನು ಹೇಳಬಹುದು, ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.