ಸಿಡ್ನಿ(ಆಸ್ಟ್ರೇಲಿಯಾ):ಎಸ್ಸಿಜಿ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 66 ರನ್ಗಳಿಂದ ಕಾಂಗ್ರೋಗಳಿಗೆ ಶರಣಾಗಿದೆ.
ಆ್ಯಡಂ ಜಂಪಾ ಮತ್ತು ಹೆಜಲ್ವುಡ್ ಬೌಲಿಂಗ್ ದಾಳಿಗೆ ಪೆಲಿಲಿಯನ್ ಸೇರಿದ ಭಾರತೀಯ ಆಟಗಾರರು, ನಿಗದಿತ 50 ಓವರ್ಗಳಲ್ಲಿ 308 ರನ್ಗಳಿಸಿದ್ರು. ಮೊದಲ ಏಕದಿನ ಪಂದ್ಯದಲ್ಲಿ 66 ರನ್ಗಳ ಜಯ ದಾಖಲಿಸಿದ ಆಸೀಸ್ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
375 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22 ರನ್ಗಳಿಸಿ ಪೆವಿಲಿಯನ್ ಸೇರಿದ್ರು, ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಸಮಯ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. 21 ರನ್ಗಳಿಸಿ ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಬಂದ ಶ್ರೇಯಸ್ ಅಯ್ಯರ್(2), ಕೆ ಎಲ್ ರಾಹುಲ್(12) ಬೇಗನೆ ಪೆವಿಲಿಯನ್ ಸೇರಿದ್ರು. ಭಾರತ ತಂಡ 13 ಓವರ್ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 113 ರನ್ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಉತ್ತಮವಾಗಿ ಬ್ಯಾಟ್ ಬೀಸಿದ್ರು.
ಈ ಜೋಡಿ ಐದನೇ ವಿಕೆಟ್ಗೆ 128 ರನ್ಗಳ ಉತ್ತಮ ಜೊತೆಯಾಟ ನೀಡಿತು. 74 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್, ಜಂಪಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಒಂದೆಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಾಂಡ್ಯ 76 ಎಸೆತಗಳಲ್ಲಿ 90 ರನ್ಗಳಿಸಿ ಜಂಪಾ ಬೌಲಿಂಗ್ನಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡಿದ್ರು. ಈ ಮೂಲಕ ಟೀಂ ಇಂಡಿಯಾದ ಗೆಲುವಿನ ಆಸೆಗೆ ತಣ್ಣೀರು ಬಿತ್ತು.
ಅಂತಿಮವಾಗಿ ಭಾರತ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಜಂಪಾ 4 ವಿಕೆಟ್ ಪಡೆದ್ರೆ, ಹೆಜಲ್ವುಡ್ 3 ಮತ್ತು ಸ್ಟಾರ್ಕ್ 1 ವಿಕೆಟ್ ಪಡೆದು ಮಿಂಚಿದ್ರು.