ಬ್ರಿಸ್ಬೇನ್:ರಾಷ್ಟ್ರೀಯ ತಂಡದಲ್ಲಿ ಆಡುವ ಮುನ್ನ ಭಾರತ 'ಎ' ತಂಡಕ್ಕಾಗಿ ಹಿಂದೆ ವಿದೇಶಿ ಪ್ರವಾಸ ಕೈಗೊಂಡಿದ್ದು ಸಾಕಷ್ಟು ನೆರವಾಯಿತು ಎಂದು ಭಾರತ ತಂಡದ ವೇಗಿ ಶಾರ್ದುಲ್ ಠಾಕೂರ್ ಭಾನುವಾರ ತಿಳಿಸಿದ್ದಾರೆ.
ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡ ಭಾನುವಾರ 4ನೇ ದಿನ 336 ರನ್ಗಳಿಗೆ ಆಲೌಟ್ ಆಗಿದೆ. 186 ರನ್ಗಳಿಗೆ 6 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಶಾರ್ದುಲ್ ಠಾಕೂರ್ (67) ಮತ್ತು ವಾಷಿಂಗ್ಟನ್ ಸುಂದರ್ (62) 123 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ಎ-ಪ್ರವಾಸಗಳು ದ್ವಿತೀಯ ದರ್ಜೆ ತಂಡಗಳಿಗೆ ಸಾಕಷ್ಟು ಅನುಭವ ನೀಡಿವೆ. ಇವು ಇಂದು ನನಗೆ ತುಂಬಾ ಅನುಕೂಲವಾದವು. ನಾವು 2016ರ ಪ್ರವಾಸದಲ್ಲಿ ಅಲನ್ ಬಾರ್ಡರ್ ಮೈದಾನದಲ್ಲಿ 4 ದಿನಗಳ ಪಂದ್ಯಗಳನ್ನು ಆಡಿದ್ದೆವು. ಅಲ್ಲಿನ ಪಿಚ್ಗಳು ವಿಭಿನ್ನವಾಗಿದ್ದವು. ಆದರೆ ಆಸ್ಟ್ರೇಲಿಯನ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗಿವೆ. ನೀವು ಭಾರತ ಎ ತಂಡದಿಂದ ಹಿರಿಯರ ತಂಡಕ್ಕೆ ಬಡ್ತಿ ಪಡೆದಾಗ ಪರಿವರ್ತನೆ ಅಷ್ಟು ಕಷ್ಟವಲ್ಲ. ಆದರೆ ನೀವು ಅದನ್ನು ಯಾವ ಮಟ್ಟದಲ್ಲಿ ಕಾರ್ಯಗತಗೊಳಿಸುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ ಶಾರ್ದುಲ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.