ಬ್ರಿಸ್ಬೇನ್:ಗಬ್ಬಾ ಮೈದಾನದಲ್ಲಿ ಆಸೀಸ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ರೆಡ್ ಬಾಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಅಪಾಯಕಾರಿ ಆಟಗಾರ ಸ್ಟೀವ್ ಸ್ಮಿತ್ಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಸ್ಮಿತ್ಗೆ ಪೆವಿಲಿಯನ್ ದಾರಿ ತೋರಿದ ಸುಂದರ್: ಸಚಿನ್, ಶಿವರಾಮಕೃಷ್ಣನ್ ನಂತರ ಹೊಸ ಮೈಲಿಗಲ್ಲು - ವಾಷಿಂಗ್ಟನ್ ಸುಂದರ್ ಪದಾರ್ಪಣೆ
ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ವಿಕೆಟ್ ಪಡೆದ ಮೂರನೇ ಯುವ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಸುಂದರ್ ಪಾತ್ರರಾಗಿದ್ದಾರೆ.
ಲಾಬುಶೇನ್ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸ್ಮಿತ್ 36 ರನ್ ಗಳಿಸಿರುವಾಗ ಸುಂದರ್ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ವಿಕೆಟ್ ಪಡೆದ ಮೂರನೇ ಯುವ ಸ್ಪಿನ್ ಬೌಲರ್(21 ವರ್ಷ 102 ದಿನ) ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಸಚಿನ್ (8 ವರ್ಷ253 ದಿನ) ಮತ್ತು ಶಿವರಾಮಕೃಷ್ಣನ್ (19 ವರ್ಷ 360 ದಿನ) ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಪಡೆದ ಭಾರತದ ಯುವ ಸ್ಪಿನ್ನರ್ಗಳಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾ ಪರ 301ನೇ ಟೆಸ್ಟ್ ಆಟಗಾರನಾಗಿ ಪದಾರ್ಪಣೆ ಮಾಡಿದ್ದಾರೆ.