ಬ್ರಿಸ್ಬೇನ್: ಆಲ್ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 336ಕ್ಕೆ ಸರ್ವಪತನ ಕಂಡಿದ್ದು 33 ರನ್ಗಳ ಅಲ್ಪ ಹಿನ್ನಡೆ ಹೊಂದಿದೆ.
ಎರಡನೇ ದಿನದ ದ್ವಿತೀಯ ಅವಧಿಯ ಆಟ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆ ಹಾಕಿದರು. 3ನೇ ವಿಕೆಟ್ಗೆ ಈ ಜೋಡಿ 45 ರನ್ ಒಟ್ಟುಗೂಡಿಸಿತು.
ಎರಡನೇ ದಿನದ ದ್ವಿತೀಯ ಆಟದ ಅವಧಿ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆ ಹಾಕಿದರು. 3ನೇ ವಿಕೆಟ್ಗೆ ಈ ಜೋಡಿ 45 ರನ್ ಸೇರಿಸಿತು.
94 ಎಸೆತಗಳಲ್ಲಿ 25 ರನ್ ಗಳಿಸಿದ ಚೇತೇಶ್ವರ ಪೂಜಾರ, ಹೆಜಲ್ವುಡ್ ಎಸೆತದಲ್ಲಿ ಪೇನ್ಗೆ ಕ್ಯಾಚಿತ್ತು ನಿರ್ಗಮಿಸಿದರು. ತಾಳ್ಮೆಯಿಂದ ಎಚ್ಚರಿಕೆಯ ಆಟವಾಡುತ್ತಿದ್ದ ರಹಾನೆ, ಸ್ಟಾರ್ಕ್ ಬೌಲಿಂಗ್ನಲ್ಲಿ ಎಡವಿದರು. ಕೇವಲ 37 ರನ್ಗಳಿಗೆ ವೇಡ್ಗೆ ಕ್ಯಾಚ್ ಕೊಟ್ಟು ನಿರಾಸೆ ಅನುಭವಿಸಿದರು.
ನಂತರ ಜೊತೆಯಾದ ಮಯಾಂಕ್ ಮತ್ತು ಪಂತ್ ಜೋಡಿಯೂ ಕೂಡ ಹೆಚ್ಚು ಕಾಲ ಬ್ಯಾಟ್ ಬೀಸಲಿಲ್ಲ. 38 ರನ್ ಗಳಿಸಿದ ಅಗರ್ವಾಲ್, ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ಪಂತ್, ಇಂದಿನ ಪಂದ್ಯದಲ್ಲಿ 23 ರನ್ಗಳಿಸಿ ಹೆಜಲ್ವುಡ್ ಎಸೆತದಲ್ಲಿ ಗ್ರೀನ್ಗೆ ಕ್ಯಾಚ್ ನೀಡಿ ಹೊರ ನಡೆದರು.