ಬ್ರಿಸ್ಬೇನ್:ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟಿಂ ಇಂಡಿಯಾ ಅನುಭವಿ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭೋಜನ ವಿರಾಮದ ವೇಳೆಗೆ 208 ರನ್ಗಳ ಹಿನ್ನಡೆ ಅನುಭವಿಸಿದೆ.
ಮಳೆಯ ಕಾರಣದಿಂದಾಗಿ ಎರಡನೇ ದಿನ ಮೂರನೇ ಸೆಷನ್ ರದ್ದುಗೊಂಡಿತ್ತು. ಎರಡನೇ ದಿನದ ದ್ವಿತೀಯ ಸೆಷನ್ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆಹಾಕಿದ್ರು. 3ನೇ ವಿಕೆಟ್ಗೆ ಈ ಜೋಡಿ 45 ರನ್ ಒಟ್ಟುಗೂಡಿಸಿತು.