ಬ್ರಿಸ್ಬೇನ್(ಆಸ್ಟ್ರೇಲಿಯಾ): ಗಬ್ಬಾದಲ್ಲಿ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ವೇಗಿ ಟಿ.ನಟರಾಜನ್ ಮತ್ತು ಆಲ್ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದ್ದು, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಹನುಮಾ ವಿಹಾರಿ ಮತ್ತು ಜಸ್ಪ್ರೀತ್ ಬುಮ್ರಾ ಹೊರಗುಳಿಸಿದ್ದಾರೆ. ಶರ್ದುಲ್ ಠಾಕೂರ್, ಟಿ ನಟರಾಜನ್, ಮಯಾಂಕ್ ಅಗರ್ವಾಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ಸ್ಪಿನ್ನರ್ ಸುಂದರ್ ಮತ್ತು ವೇಗಿ ನಟರಾಜನ್ ಜೋಡಿ ಟೆಸ್ಟ್ಗೆ ಪದಾರ್ಪಣೆ ಮಾಡಿದೆ. ಗಾಯಗೊಂಡ ವಿಲ್ ಪುಕೋವ್ಸ್ಕಿ ಬದಲು ಮಾರ್ಕಸ್ ಹ್ಯಾರಿಸ್ ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಿದ್ರು.