ಸಿಡ್ನಿ: ಲಾಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅವರ ಅರ್ಧಶತಕದ ನೆರವಿನಿಂದ ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಮಾಡಿ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಡಿಕ್ಲೇರ್ ಮಾಡಿಕೊಡಿದ್ದು, ಭಾರತಕ್ಕೆ 407 ರನ್ಗಳ ಗುರಿ ನೀಡಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 103 ರನ್ಗಳಿಸಿದ್ದ ಆಸೀಸ್ ಪರ ಬ್ಯಾಟಿಂಗ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದ್ರು. 3ನೇ ವಿಕೆಟ್ಗೆ ಈ ಜೋಡಿ ಶತಕದ ಜೊತೆಯಾಟವಾಡಿತು.
ಮೊದಲ ಇನ್ನಿಂಗ್ಸ್ನಂತೆ ದ್ವಿತೀಯ ಇನ್ನಿಂಗ್ಸ್ನಲ್ಲೂ ಟೀಂ ಇಂಡಿಯಾ ಆಟಗಾರರನ್ನು ಕಾಡಿದ ಲಾಬುಶೇನ್ ಅರ್ಧಶತಕ ಸಿಡಿಸಿದ್ರು. ಆದರೆ 73 ರನ್ ಗಳಿಸಿರುವಾಗ ಸೈನಿ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಂತರ ಬಂದ ಮ್ಯಾಥ್ಯೂ ವೇಡ್ (4) ತಮ್ಮ ಕಳಪೆ ಆಟವನ್ನು ಮುಂದುವರೆಸಿದ್ದು, ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ್ರು.
ಕ್ರೀಸ್ ಕಚ್ಚಿ ನಿಂತ ಸ್ಟೀವ್ ಸ್ಮಿತ್ ಅರ್ಧಶತಕ ಸಿಡಿಸಿ ಭಾರತೀಯ ಬೌಲರ್ಗಳನ್ನು ಕಾಡಲು ಶುರು ಮಾಡಿದ್ರು. ಆದರೆ ದಾಳಿಗಿಳಿದ ಅಶ್ವಿನ್ ಸ್ಮಿತ್ರನ್ನು ಎಲ್ಬಿ ಬಲೆಗೆ ಕೆಡವಿ ಭಾರತಕ್ಕೆ ಮೇಲುಗೈ ತಂದುಕೊಟ್ರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಗ್ರೀನ್ 4 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 84 ರನ್ ಸಿಡಿಸಿ ಸ್ಕೋರ್ ಹೆಚ್ಚಿಸಿದ್ರು.
ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಗ್ರೀನ್ ಅವರ ವಿಕೆಟ್ ಪಡೆಯುವಲ್ಲಿ ವೇಗಿ ಬುಮ್ರಾ ಯಶಸ್ವಿಯಾದ್ರು. ಪೇನ್ 39 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಭಾರತದ ಪರ ಸೈನಿ ಮತ್ತು ಅಶ್ವಿನ್ ತಲಾ 2 ವಿಕೆಟ್ ಪಡೆದ್ರೆ, ಬುಮ್ರಾ ಮತ್ತು ಸಿರಾಜ್ ಒಂದೊಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 338 ರನ್ ಗಳಿಸಿ ಆಲ್ಔಟ್ ಆಗಿದ್ರೆ, ಭಾರತ 244 ರನ್ಗಳಿಗೆ ಸರ್ವಪತನ ಕಂಡಿತ್ತು.