ಸಿಡ್ನಿ: ಭಾರತ ತಂಡ ಬಾರ್ಡರ್-ಗಾವಸ್ಕರ್ ಸರಣಿಯ ಮೂರನೇ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ಮೊದಲ 100 ಎಸೆತಗಳಲ್ಲಿ 6 ರನ್‌ಗಳಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ 100 ಎಸೆಗಳಲ್ಲಿ ಗಳಿಸಿದ ಅತ್ಯಂತ ಕಡಿಮೆ ರನ್ ಆಗಿದೆ.
ಕೊನೆಯ ದಿನ ಪಂತ್ ಮತ್ತು ಪೂಜಾರ ಅವರ ಭರ್ಜರಿ ಆಟದ ನೆರವಿನಿಂದ ಗೆಲುವಿನತ್ತ ಸಾಗಿದ್ದ ಪಂದ್ಯ ಅವರಿಬ್ಬರ ನಂತರ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಶ್ವಿನ್ ಹಾಗೂ ಗಾಯಾಳು ವಿಹಾರಿ ಅವರ ಸಾಹಸದಿಂದ ಡ್ರಾನಲ್ಲಿ ಅಂತ್ಯಗೊಂಡಿತು.
ವಿಹಾರಿ ಈ ಇನ್ನಿಂಗ್ಸ್ನಲ್ಲಿ ಮೊದಲ 100 ಎಸೆಗಳಲ್ಲಿ 6 ರನ್ ಸಿಡಿಸಿದ್ದರು. ಕೊನೆಗೆ 161 ಎಸೆತಗಲಲ್ಲಿ ಅಜೇಯ 23 ರನ್ ಸಿಡಿಸಿ ಡ್ರಾ ಆಗುವಂತೆ ನೆರವಾದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ನ ಜಾನ್ ಮರ್ರೆ ಅವರ ನಂತರ ಬ್ಯಾಟ್ಸ್ಮನ್ ಒಬ್ಬ 100 ಎಸೆತಗಳಲ್ಲಿ ಗಳಿಸಿದ 2ನೇ ಕನಿಷ್ಟ ಮೊತ್ತ ಎನಿಸಿಕೊಂಡಿತು. ಮರ್ರೆ 100 ಎಸೆತಗಳಲ್ಲಿ ಇದೇ ಕ್ರೀಡಾಂಗಣದಲ್ಲಿ 3 ರನ್‌ಗಳಿಸಿದ್ದರು.
ಚೇತೇಶ್ವರ್ ಪೂಜಾರ ವಿಕೆಟ್ ನಂತರ ಮೈದಾನಕ್ಕೆ ಬಂದಿದ್ದ ಅವರು ಹ್ಯಾಮ್ಸ್ಟ್ರಿಂಗ್ಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ್ದ ಅಶ್ವಿನ್ ಜೊತೆಗೆ ಎರಡೂವರೆ ಗಂಟೆಗಳ ಕಾಲ ಆಡಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ಇದನ್ನು ಓದಿ:2002ರ ನಂತರ 4ನೇ ಇನ್ನಿಂಗ್ಸ್ನಲ್ಲಿ 100ಕ್ಕೂ ಹೆಚ್ಚು ಓವರ್ ಬ್ಯಾಟ್ ಬೀಸಿದ ಟೀಂ ಇಂಡಿಯಾ