ಕರ್ನಾಟಕ

karnataka

ETV Bharat / sports

ಅಭ್ಯಾಸ ಪಂದ್ಯದಲ್ಲಿ ಸೊನ್ನೆ ಸುತ್ತಿದ ಪೃಥ್ವಿ ಶಾ- ಗಿಲ್​: ನಾಯಕ ರಹಾನೆ ಶತಕದಾಟ

ಅಜಿಂಕ್ಯ ರಹಾನೆ 228 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 108 ರನ್​ಗಳಿಸಿ ಪಂದ್ಯದಲ್ಲಿ ಅಜೇಯರಾಗುಳಿದಿದ್ದಾರೆ.

IND A vs AUS A
ಭಾರತ ಎ ಮತ್ತು ಆಸ್ಟ್ರೇಲಿಯಾ ಎ ಟೆಸ್ಟ್ ಪಂದ್ಯ

By

Published : Dec 6, 2020, 4:12 PM IST

ಸಿಡ್ನಿ: ಆಸ್ಟ್ರೆಲಿಯಾ ಎ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಸಿಡಿಸಿದ ಅಜೇಯ ಶತಕದ ನೆರವಿನಿಂದ ಭಾರತ ಎ ತಂಡ ಮೊದಲ ದಿನ 8 ವಿಕೆಟ್​ ಕಳೆದುಕೊಂಡು 237 ರನ್​ಗಳಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡಕ್ಕೆ ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ನಂತರ ಬಂದ ಹನುಮ ವಿಹಾರಿ ಕೂಡ 15 ರನ್​ಗಳಿಗೆ ಔಟಾದರು.

40 ರನ್‌ಗಳಿಗೆ 3 ವಿಕೆಟ್​ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿದ್ದ ಸಂದರ್ಭದಲ್ಲಿ ನಾಲ್ಕನೇ ವಿಕೆಟ್​ ಕ್ರೀಸಿನಲ್ಲಿ ಒಂದಾದ ಅನುಭವಿಗಳಾದ ಚೇತೇಶ್ವರ್ ಪೂಜಾರ ಮತ್ತು ನಾಯಕ ರಹಾನೆ 76 ರನ್​ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಪೂಜಾರ 140 ಎಸೆತಗಳಲ್ಲಿ 54 ರನ್​ಗಳಿಸಿ ಔಟಾದರು.

ಓದಿ:ಸ್ಮಿತ್​, ವೇಡ್​ ಆರ್ಭಟ: ಭಾರತಕ್ಕೆ 195ರನ್​ಗಳ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

ಪೂಜಾರ ಔಟಾಗುತ್ತಿದ್ದಂತೆ ಕ್ರೀಸಿಗೆ ಬಂದ ವೃದ್ಧಿಮಾನ್ ಸಹಾ(0), ಅಶ್ವಿನ್​(5), ಉಮೇಶ್ ಯಾದವ್​(24) ಹೆಚ್ಚು ಹೊತ್ತು ನಿಲ್ಲದೇ ಹೋದರು. ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಹೋರಾಟ ನಡೆಸಿದ ರಹಾನೆ 228 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 108 ರನ್​ಗಳಿಸಿ ಅಜೇಯರಾಗುಳಿದರು.

ಆಸ್ಟ್ರೇಲಿಯಾ ಎ ಪರ ಜೇಮ್ಸ್​ ಪ್ಯಾಟಿನ್ಸನ್​ 3 ವಿಕೆಟ್, ಮೈಕಲ್ ನಸೀರ್​, ಟ್ರಾವಿಸ್ ಹೆಡ್​ ತಲಾ ಎರಡು ವಿಕೆಟ್ ಹಾಗೂ ಜಾಕ್ಸನ್​ ಬರ್ಡ್​ 1 ವಿಕೆಟ್ ಪಡೆದರು.

ABOUT THE AUTHOR

...view details