ಅಬುಧಾಬಿ:ಅರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿರುದ್ಧ 3ನೇ ಅಂಪೈರ್ ನೀಡಿದ ತೀರ್ಪಿಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಡೇವಿಡ್ ವಾರ್ನರ್ ಹೊಡೆಯಲೆತ್ನಿಸಿದ ಚೆಂಡು ನೇರ ವಿಕೆಟ್ ಕೀಪರ್ ವಿಲಿಯರ್ಸ್ ಕೈ ಸೇರಿತು. ಮೈದಾನದ ಅಂಪೈರ್ ರವಿ ಅದನ್ನು ನಾಟೌಟ್ ಎಂದು ತೀರ್ಪು ನೀಡಿದ್ದರು.
ಆದರೆ ಆರ್ಸಿಬಿ ನಾಯಕ ಕೊಹ್ಲಿ ರಿವ್ಯೂವ್ ತೆಗೆದುಕೊಂಡರು. ಟಿವಿ ರಿಪ್ಲೇನಲ್ಲಿ ಚೆಂಡು ಗ್ಲೌಸ್ ಅಥವಾ ಪ್ಯಾಡ್ಗೆ ತಗುಲಿರುವಂತೆ ಕಾಣಿಸುತ್ತಿತ್ತು. ಆದರೆ ಯಾವುದಕ್ಕೆ ತಾಗಿದೆ ಎನ್ನುವುದು ಪಕ್ಕಾ ಆಗಲಿಲ್ಲ. ಇಂತಹ ಸ್ಥಿತಿಗಳಲ್ಲಿ ತೀರ್ಪು ಬ್ಯಾಟ್ಸ್ಮನ್ ಪರವಾಗಿ ನೀಡಬೇಕು. ಆದರೆ ಮೂರನೇ ಅಂಪೈರ್ ಆಗಿದ್ದ ವಿರೇಂದರ್ ಶರ್ಮಾ ಔಟ್ ಎಂದು ತೀರ್ಪು ನೀಡಿದರು.