ಮುಂಬೈ: 14ನೇ ಆವೃತ್ತಿಯ ಐಪಿಎಲ್ಗೆ ಇನ್ನೂ 3 ತಿಂಗಳ ಸಮಯವಿದೆ. ಈಗಾಗಲೇ ತಂಡವನ್ನು ಸುಸಜ್ಜಿತವಾಗಿ ಕಟ್ಟಿಕೊಳ್ಳಲು ಫೆಬ್ರವರಿಯಲ್ಲಿ ಮಿನಿ ಹರಾಜಿಗೆ ಅವಕಾಶ ಮಾಡಿಕೊಡಲಾಗಿದೆ. ಬುಧವಾರ ಎಲ್ಲಾ ಫ್ರಾಂಚೈಸಿಗಳು ಉತ್ತಮ ಪ್ರದರ್ಶನ ತೋರದ ಹಾಗೂ ದುಬಾರಿಯಾಗಿರುವ ಆಟಗಾರರನ್ನು ಕೈಬಿಟ್ಟಿವೆ.
ಕಳೆದ ಐಪಿಎಲ್ನಿಂದ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ ಎನ್ನಲಾಗುತ್ತಿದೆ. ಅದಕ್ಕಾಗಿ ತಮ್ಮ ತಂಡದಲ್ಲಿ ದುಬಾರಿ ಹಣ ತೆತ್ತು ಏನೂ ಪ್ರಯೋಜನವಾಗದ ಆಟಗಾರರನ್ನು ರಿಲೀಸ್ ಮಾಡಿಕೊಂಡು ಮಿನಿ ಹರಾಜಿಗೆ ಬಕ ಪಕ್ಷಿಗಳಂತೆ ಕಾಯುತ್ತಿವೆ.
ಮಾಜಿ ಕ್ರಿಕೆಟಿಗ ಅಕಾಶ್ ಚೋಪ್ರಾ ಕೂಡ ಆಸೀಸ್ ವೇಗಿ ಮಿನಿ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಖರೀದಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದ ಮುಜೀಬ್ 6-7 ಕೋಟಿ, ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 5-6 ಕೋಟಿ, ಕಿವೀಸ್ ಆಲ್ರೌಂಡರ್ ಜೆಮೀಸನ್ 5-7, ಇಂಗ್ಲೆಂಡ್ ಓಪನರ್ ಜೇಸನ್ ರಾಯ್ 4-6, ಹಾಗೂ ಮ್ಯಾಕ್ಸ್ವೆಲ್ ಮತ್ತು ನಾಥನ್ ಕೌಲ್ಟರ್ ನೈಲ್ ಮತ್ತೆ ಈಗಿರುವಷ್ಟೇ ಮೊತ್ತವನ್ನು ಪಡೆಯಲಿದ್ದಾರೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ದಶಕದ ನಂತರ ಮಾಲಿಂಗನ ಬಿಟ್ಟುಕೊಟ್ಟ ಮುಂಬೈ ಇಂಡಿಯನ್ಸ್: 18 ಆಟಗಾರರ ರೀಟೈನ್