ಕರ್ನಾಟಕ

karnataka

ETV Bharat / sports

90ರ ದಶಕದ ಇಮ್ರಾನ್‌ಗಿಂತ ಕೊಹ್ಲಿಯದ್ದೇ 'ವಿರಾಟ ಸ್ವರೂಪ'..! - undefined

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಸೇರಿ ಸಾಕಷ್ಟು ಪಂದ್ಯಗಳಿಂದ ಹೊರಗುಳಿದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದ್ದಾರೆ.

ಪಾಕ್ ಮಾಜಿ​ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಹಾಗೂ ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ.

By

Published : Feb 22, 2019, 1:49 PM IST

ಹೈದರಾಬಾದ್: ಪ್ರತಿ ಸಾರಿ ತಂಡದಿಂದ ವಿರಾಟ್ ಕೊಹ್ಲಿ ಹೊರಗುಳಿದ್ರೇ ಸಾಕು ಚರ್ಚೆ ಶುರುವಾಗುತ್ತೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಸೇರಿ ಸಾಕಷ್ಟು ಪಂದ್ಯಗಳಿಂದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ.

ಕಿವೀಸ್‌ ವಿರುದ್ಧದ ಒನ್‌ಡೇ ಸಿರೀನ್‌ನ ಐದು ಪಂದ್ಯಗಳಲ್ಲಿ ಬರೀ ಮೂರರಲ್ಲಿ ಕಾಣಿಸಿದ ಕೊಹ್ಲಿ ಆಮೇಲೆ ವಿಶ್ರಾಂತಿ ತಗೊಂಡಿದ್ದರು. ಟಿ-೨೦ಗೂ ಚಕ್ಕರ್ ಹಾಕಿದ್ರು. ನ್ಯೂಜಿಲೆಂಡ್ -ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಸೇರಿ ಇತ್ತೀಚೆಗೆ ಸಾಕಷ್ಟು ಪಂದ್ಯ ಆಡಿಲ್ಲ ವಿರಾಟ್‌ ಕೊಹ್ಲಿ.

ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡ ಮುನ್ನಡೆಸಿದ್ದರು. ಪದೇಪದೆ ತಂಡದಿಂದ ಹೊರಗುಳಿಯುವ ಇಂಥ ರಿಸ್ಕ್‌ನ ಕೊಹ್ಲಿ ಯಾಕೆ ತಗೊಳ್ತಾರೆ ಅನ್ನೋ ಬಗ್ಗೆ ಪ್ರಶ್ನೆ ‌ಕಾಡುತ್ತೆ. ಬಹಳದಿನಗಳಿಂದಲೂ ಕೂಹ್ಲಿ ನಿರಂತರವಾಗಿ ಕ್ರಿಕೆಟ್ ಆಡಿದ್ದಾರೆ.

ಭಾರತ ತಂಡ ಈಗ ಒಳ್ಳೇ‌ ಫಾರ್ಮ್‌ನಲ್ಲಿದೆ, ಒಳ್ಳೇ‌ ಪರ್ಫಾಮ್ ನೀಡ್ತಿದೆ. ಒನ್‌ಡೇ ಸಿರೀಸ್ ಗೆದ್ದು ಕಿವೀಸ್ ನೆಲದಲ್ಲಿ ಕೊಹ್ಲಿ ಬ್ರಿಗೇಡ್ ಇತಿಹಾಸ ನಿರ್ಮಿಸಿದೆ. ಟಿ-20ಯಲ್ಲೂ ಒಳ್ಳೇ ಪ್ರದರ್ಶನ ನೀಡಿ ಫೈನಲ್‌ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಬ್ಲ್ಯೂಬಾಯ್ಸ್ ತವರಿನಲ್ಲಿ ಈಗ ಒನ್ ಡೇ ಸಿರೀಸ್ ಆಡಲಿದೆ. ಹಾಗಾಗಿ ಕಪ್ತಾನ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅವಶ್ಯವಿದೆ.

ದಿಲ್ಲಿವಾಲಾ ಒಂದಿಷ್ಟು ಕಾಲ ರೆಸ್ಟ್ ಮಾಡಿದ್ರೇ ಯಾರೂ ಚಿಂತೆ ಮಾಡಬೇಕಿಲ್ಲ. ಯಾಕಂದ್ರೇ, ಈಗ ಕ್ರಿಕೆಟ್ ಜಗತ್ತಿನಲ್ಲಿ ಒಳ್ಳೇ‌ ಪಳಗಿದ, ಓಡೋ ಕುದುರೆ ವಿರಾಟ್‌ ಕೊಹ್ಲಿ. ಈ ಕುದುರೆ ಕಟ್ಟಿ ಹಾಕೋದಿರಲಿ, ಮುಟ್ಟೋಕೂ ಆಗ್ತಿಲ್ಲ. ಸದ್ಯ ಕೊಹ್ಲಿಯ ಅಬ್ಬರವನ್ನ ಹೋಲುವಂತೆ ಸೇಮ್ ಟೂ ಸೇಮ್ ೯೦ರ ದಶಕದಲ್ಲಿ ಪಾಕ್‌ನ ಇಮ್ರಾನ್ ಖಾನ್‌ ಕೂಡ ಇದ್ದರು.

ವಿರಾಟ್ ಕೊಹ್ಲಿ- ಇಮ್ರಾನ್‌ಖಾನ್‌ ಮಧ್ಯೆ ಸಾಮ್ಯತೆ:

90ರ ದಶಕದಲ್ಲಿ ಇಮ್ರಾನ್ ಖಾನ್‌ಗಿದ್ದಷ್ಟೇ ಚರಿಷ್ಮಾ ಕೊಹ್ಲಿಗೂ ಇದೆ. ಆಗ ‌ಇಮ್ರಾನ್ ಪಾಕ್‌ನ ಸರ್ವಶ್ರೇಷ್ಠ ಆಟಗಾರ. ಕ್ಯಾಪ್ಟನ್ ಕೂಡ ಆಗಿದ್ದ ಇಮ್ರಾನ್‌ ತನಗೆಬೇಕಾದ ಕೋಚ್ ಹಾಗೂ ಆಟಗಾರರನ್ನೂ ಸೆಲೆಕ್ಟ್ ಮಾಡಿಕೊಳ್ತಾಯಿದ್ದರು. ಅದರ ವಿರುದ್ಧ ಯಾರೂ ಅಪಸ್ವರ ಎತ್ತುತ್ತಿರಲಿಲ್ಲ. ಈಗ ಕೊಹ್ಲಿ ಕೂಡ ಟೀಂ ಇಂಡಿಯಾದಲ್ಲೂ ಹಾಗೇ ಇದ್ದಾರೆ.

ಟೀಂನಲ್ಲಿ ಕೊಹ್ಲಿ ಹೇಳಿದ್ದೇ ವೇದವಾಕ್ಯ ಅನ್ನೋದು ಮುಚ್ಚಿಡಲಾಗಲ್ಲ. ಕೋಚ್ ಕೂಡ ತನಗೆ ಬೇಕಾದವರನ್ನೇ ಕೊಹ್ಲಿ ಆಯ್ಕೆ ಮಾಡ್ಕೊಂಡಿದ್ದಾರೆ ಅನ್ನೋದನ್ನ ಕ್ರಿಕೆಟ್ ನೋಡೋ ಆಡೋ ಹುಡುಗನಿಗೂ ಗೊತ್ತು.

ಅಸಲಿಯತ್ತೇನೆಂದ್ರೇ, ಇಷ್ಟೊಂದ್ ಒಳ್ಳೇ ಪರ್ಫಾರ್ಮೆನ್ಸ್ ನೀಡೋ‌ ತಂಡದ ನಾಯಕ ಬಯಸಿದಂತಾ ಆಟಗಾರರನ್ನ ಇರಿಸಿಕೊಳ್ಳೋದು ತಪ್ಪಲ್ಲ ಅಂತಾ BCCI ಆಯ್ಕೆ ಸಮಿತಿಗೂ ಗೊತ್ತಿದೆ. ಕೊಹ್ಲಿ ಇಚ್ಛೆಯ ವಿರುದ್ಧ ಯಾರೂ ಹೋಗೋಕಾಗಲ್ಲ. ವಿರಾಟ್‌ ಸದ್ಯ ಇಂಡಿಯನ್‌ ಕ್ರಿಕೆಟ್‌ನಲ್ಲಿ ಸೂಪರ್‌ಸ್ಟಾರ್‌ ಪ್ಲೇಯರ್.

ಆಯ್ಕೆ ಸಮಿತಿ ಕೊಹ್ಲಿಯಿಂದ ಇಷ್ಟೇ ಬಯಸುತ್ತೆ:

ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿಯನ್ನ ತಡೆಯೋರಿಲ್ಲ. ವ್ಯಕ್ತಿಗತ ಸ್ಕೋರ್‌ ಹೆಚ್ಚಿಸಿಕೊಳ್ಳುವ ಜತೆಗೆ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡ್ತಾ ನಾಯಕನಾಗಿ ಗೆಲುವು ಧಕ್ಕಿಸಿಕೊಡ್ತಿದ್ದಾರೆ. ಬಿಸಿಸಿಐ ಬಾಸ್‌ಗಳಿಗೆ ಇದಕ್ಕಿಂತ ಬೇರೇನ್‌ ಬೇಕಿಲ್ಲ ಅನ್ಸುತ್ತೆ.

ಪಾಕ್ ಮಾಜಿ​ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಹಾಗೂ ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ.

ಇಮ್ರಾನ್‌ಖಾನ್‌ ಕೂಡ ಆಗ ಒಳ್ಳೇ ಪರ್ಫಾಮೆನ್ಸ್‌ ನೀಡ್ತಾ, ನಾಯಕನಾಗಿಯೂ ಪಂದ್ಯ ಗೆಲ್ಲಿಸಿಕೊಡುತ್ತಿದ್ದರು. ಕ್ಯಾಪ್ಟನಾಗಿ ಕೊಹ್ಲಿ ಮತ್ತು ಇಮ್ರಾನ್‌ ಮಧ್ಯೆ ಈ ವಿಷಯದಲ್ಲಿ ಸಾಮತ್ಯೆಯಿದೆ. ಮ್ಯಾಚ್‌ ಗೆಲ್ಲಿಸಿಕೊಡುವುದರಲ್ಲಿ ಈ ಇಬ್ಬರೂ ಲೆಜೆಂಡ್‌ಗಳೇ.

ಇದು ಕ್ರಿಕೆಟ್‌ ಮಧ್ಯೆ ವಿಶ್ರಾಂತಿ ಪಡೆಯಲು ಕಾರಣ:

ಬಿಡುವಿಲ್ಲದೇ ಜಬರ್ದಸ್ತಾಗಿ ಕ್ರಿಕೆಟ್‌ ಆಡ್ತಿರುವ ವಿರಾಟ್‌ ಕೊಹ್ಲಿ ನಡುವೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ರೀತಿ ಮೊದಲು ಸಚಿನ್‌ ತೆಂಡೂಲ್ಕರ್‌ ವಿಶ್ರಾಂತಿ ಪಡೆಯುತ್ತಿದ್ದರು. ಅದರಿಂದಾಗೇ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ ಆಡಲು ಸಚಿನ್‌ಗೆ ಸಾಧ್ಯವಾಯಿತು. ಹಾಗೇ ಈಗ ಕೊಹ್ಲಿಗೂ ಹೆಚ್ಚು ವಿಶ್ರಾಂತಿ ಅವಶ್ಯ. ಸಚಿನ್‌ ದೇಶಕ್ಕಿಂತ ಹಣಕ್ಕಾಗಿ ಆಡ್ತಾರೆ ಅನ್ನೋ ಆರೋಪವೂ ಇತ್ತು.

ಯಾವ ಪಂದ್ಯ ಆಡಿದ್ರೇ ಹೆಚ್ಚು ಹಣ ಸಿಗುತ್ತೋ ಅದೇ ಪಂದ್ಯ ಆಡ್ತಾರೆಂಬ ಆಪಾದನೆ ಕೇಳಿಬಂದಿತ್ತು. ಆದ್ರೇ. ಮೊದಲು ಕ್ರಿಕೆಟ್‌ನಲ್ಲಿ ಇಷ್ಟೊಂದು ಹಣ ಇರುತ್ತಿರಲಿಲ್ಲ. ಹಾಗಾಗಿ ಆಟಗಾರರು ವಿಶ್ರಾಂತಿ ಪಡೆಯುತ್ತಿರಲಿಲ್ಲ. ಆದ್ರೇ, 90ರ ದಶಕದ ಉದಾರೀಕರಣ, ಖಾಸಗೀಕರಣ ಕ್ರಿಕೆಟ್‌ನಲ್ಲಿ ಹಣದ ಹೊಳೆ ಹರಿಸಿದೆ. ಆಡುವ ಪಂದ್ಯಗಳ ಸಂಖ್ಯೆಯೂ ಹೆಚ್ಚುತ್ತಿದೆ. ಟಿ-20ಯಂತೂ ಕ್ರಿಕೆಟ್‌ನಲ್ಲಿ ಗ್ಲಾಮರ್‌ ತಂದ್ಬಿಟ್ಟಿದೆ. ಕ್ರಿಕೆಟ್ ಆಡೋದು, ವಿಶ್ರಾಂತಿ ಪಡೆಯೋದು ಈಗ ಮುಖ್ಯ ಅಲ್ಲ.

ಬಿಸಿಸಿಐ ಕೊಹ್ಲಿಗೆ ಈಗ ವಿಶ್ರಾಂತಿ ನೀಡ್ತಿದೆ. ಹೆಚ್ಚು ಆಡಿ ಗಾಯದ ಸಮಸ್ಯೆಗೀಡಾಗಬಾರದು ಅನ್ನೋ ಕಾರಣಕ್ಕೆ ರಜೆ ಅವಶ್ಯಕ. ಬೇರೆ ಆಟಗಾರರಿಗೆ ವಿಶ್ರಾಂತಿ ಪಡೆೆಯೋದು ಸುಲಭ. ಆದ್ರೇ, ಕ್ಯಾಪ್ಟನ್‌ ಪ್ರತಿ ಪಂದ್ಯದಲ್ಲೂ ಆಡಬೇಕಾಗುತ್ತೆ. ಇಷ್ಟಿದ್ರೂ ಕಿವೀಸ್‌ ವಿರುದ್ಧ 3 ಒನ್‌ಡೇ ಆಡಿ ಆಡದೇ ಟಿ-20 ಸಿರೀಸ್‌ಗೂ ಚಕ್ಕರ್‌ ಹಾಕಿದ್ದರು.

ಕೊಹ್ಲಿ ಇರದಿದ್ರೂ ಟೀಂಇಂಡಿಯಾ ಕಿವೀಸ್‌ ವಿರುದ್ಧ ಒನ್‌ಡೇ ಸಿರೀಸ್‌ ಗೆದ್ದಿದೆ. ಹಾಗೇ ಟಿ-20ಯಲ್ಲಿ ಫೈನಲ್‌ ಪಂದ್ಯ ಕೂದಲೆಳೆ ಅಂತರದಲ್ಲಿ ಕೈತಪ್ಪಿದೆ. ಅದರಲ್ಲೂ ನ್ಯೂಜಿಲೆಂಡ್‌ ಅದ್ಭುತ ಪ್ರವಾಸಿ ತಾಣಗಳನ್ನ ಹೊಂದಿದೆ. ಹಾಗಾಗಿಯೇ ವಿರುಷ್ಕಾ ದಂಪತಿ ಕಿವೀಸ್‌ನಲ್ಲಿ ಲವ್‌ ಬರ್ಡ್ಸ್‌ ರೀತಿ ಹಾರಾಡಿದ್ದರು. ಕ್ರಿಕೆಟ್‌ ಜಗತ್ತಿನ ಧೃವತಾರೆ ವಿರಾಟ್‌ ಕೊಹ್ಲಿ ಈಗ ಬರೀ ಟೀಂ ಇಂಡಿಯಾ ನಾಯಕನಷ್ಟೇ ಅಲ್ಲ, ಅವರೊಬ್ಬ ಬ್ರ್ಯಾಂಡ್‌ ಆಗಿದ್ದಾರೆ.

ಕ್ರಿಕೆಟ್‌, ಜಾಹೀರಾತು ಜತೆಗೆ ಸೋಷಿಯಲ್‌ ಮೀಡಿಯಾ ಅಕೌಂಟ್‌ನಿಂದಲೂ ಕೊಹ್ಲಿ ಕಮಾಯಿಸುತ್ತಿದ್ದಾರೆ. ದಿಲ್ಲಿವಾಲಾ ಈಗ ಒಂದು ರೀತಿ ಹಣದ ಕೈಗಾರಿಕೆ ಅಂದ್ರೂ ತಪ್ಪಲ್ಲ. ಹಣ ಗಳಿಸುವ ಚಿಂತೆ ಕೊಹ್ಲಿಗಿಲ್ಲ. ತನ್ನ ಆರೋಗ್ಯ ಹಾಗೂ ಆಟದ ಜತೆಜತೆಗೂ ಸಾರ್ವಜನಿಕ ಜೀವನದ ಬಗ್ಗೆಯೂ ಯೋಚಿಸುತ್ತಿದ್ದಾರೆ.

ಕಿವೀಸ್‌ ವಿರುದ್ಧ ಒನ್‌ಡೇ ಸಿರೀಸ್‌ ಗೆದ್ಮೇಲಂತೂ ಕೊಹ್ಲಿ ವಿಶ್ರಾಂತಿ ಪಡೆಯಲು ಯಾರ ತಕರಾರಂತೂ ಎತ್ತಿಲ್ಲ. ಇದೆಲ್ಲವನ್ನೂ ನೋಡಿದ್ರೇ 90ರ ದಶಕದಲ್ಲಿ ಕ್ಯಾಪ್ಟನಾಗಿ ಇಮ್ರಾನ್‌ ಖಾನ್‌ಗಿಂತಲೂ ಈಗಿನ ವಿರಾಟ್ ಕೊಹ್ಲಿ ನಾಲ್ಕು ಪಟ್ಟು ಮುಂದಿದ್ದಾರೆ. ಅದಕ್ಕೇ ಕೊಹ್ಲಿ ಈವರೆಗಿನ ದಾಖಲೆಗಳೇ ಸಾಕ್ಷಿ.

For All Latest Updates

TAGGED:

ABOUT THE AUTHOR

...view details