ಕರ್ನಾಟಕ

karnataka

ETV Bharat / sports

ಅಂಗಣದಲ್ಲಿರುವ ಅರ್ಹ ಆಟಗಾರರ ಪರ ಕೆಲಸ ಮಾಡುವುದು ನನ್ನ ಕರ್ತವ್ಯ: ತಾಹೀರ್‌ - IPL latest news

'ಈ ಹಿಂದೆ ನಾನು ಅಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹಲವಾರು ಆಟಗಾರರು ಮೈದಾನಕ್ಕೆ ಡ್ರಿಂಕ್ಸ್ ಹೊತ್ತು ತರುತ್ತಿದ್ದರು. ಈಗ ಅರ್ಹ ಆಟಗಾರರು ಅಂಗಳದಲ್ಲಿ ಆಡುತ್ತಿದ್ದಾರೆ. ಅವರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಇಲ್ಲಿ ನಾನು ಆಡುತ್ತಿಲ್ಲ ಎನ್ನುವುದಕ್ಕಿಂತ ತಂಡದ ಗೆಲುವು ಮುಖ್ಯ. ನನಗೆ ಅವಕಾಶ ಸಿಕ್ಕಾಗ ನಾನು ಶ್ರೇಷ್ಠ ಪ್ರದರ್ಶನ ನೀಡುತ್ತೇನೆ' -ಇಮ್ರಾನ್‌ ತಾಹೀರ್‌

ಇಮ್ರಾನ್ ತಾಹೀರ್​
ಇಮ್ರಾನ್ ತಾಹೀರ್​

By

Published : Oct 15, 2020, 5:13 PM IST

ದುಬೈ: 2019ರ ಐಪಿಎಲ್​ನಲ್ಲಿ ಪರ್ಪಲ್​ ಕ್ಯಾಪ್‌​ ಗೌರವ ಪಡೆದಿದ್ದ ಸಿಎಸ್​ಕೆ ಬೌಲರ್ ಇಮ್ರಾನ್ ತಾಹೀರ್ ಅವರಿಗೆ​ ಈ ವರ್ಷ ಮೊದಲಾರ್ಧದ ಪಂದ್ಯಗಳು ಮುಗಿದಿದ್ದರೂ ಇನ್ನೂ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ದೊರೆತಿಲ್ಲ. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಇಮ್ರಾನ್ ತಾಹೀರ್​ 17 ಪಂದ್ಯಗಳಲ್ಲಿ 26 ವಿಕೆಟ್​​ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದಿದ್ದರು. ಆದರೆ ಈ ಬಾರಿ ಚೆನ್ನೈ ತಂಡ 8 ಪಂದ್ಯಗಳನ್ನಾಡಿದ್ದರೂ ಕೂಡಾ ಇನ್ನೂ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಅವರಿಗೆ ಸಿಕ್ಕಿಲ್ಲ. ಹಾಗಾಗಿ 12ನೇ ಆಟಗಾರನಾಗಿ ತಂಡದ ಸಹ ಆಟಗಾರಿಗೆ ಡ್ರಿಂಕ್ಸ್ ಪೂರೈಸುತ್ತಿದ್ದಾರೆ. ಆದರೆ ಅಭಿಮಾನಿಗಳು ಈ ದೃಶ್ಯ ನೋಡಿ, ಶ್ರೇಷ್ಠ ಸ್ಪಿನ್ನರ್​ರನ್ನು ಡ್ರಿಂಕ್ಸ್ ಪೂರೈಸಲು ಚೆನ್ನೈ ತಂಡ ಉಪಯೋಗಿಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಮ್ರಾನ್ ತಾಹೀರ್

ಅಭಿಮಾನಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ತಾಹೀರ್, ನನಗಿಂತ ನನ್ನ ತಂಡದ ಯಶಸ್ಸೇ ಪ್ರಮುಖವಾಗಿದ್ದು, ಅವಕಾಶ ಸಿಕ್ಕಾಗ ಖಂಡಿತ ಶ್ರೇಷ್ಠ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.

'ಈ ಹಿಂದೆ ನಾನು ಅಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹಲವಾರು ಆಟಗಾರರು ಮೈದಾನಕ್ಕೆ ಡ್ರಿಂಕ್ಸ್ ಹೊತ್ತು ತರುತ್ತಿದ್ದರು. ಈಗ ಅರ್ಹ ಆಟಗಾರರು ಅಂಗಳದಲ್ಲಿ ಆಡುತ್ತಿರಬೇಕಾದರೆ ಅವರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಇಲ್ಲಿ ನಾನು ಆಡುತ್ತಿಲ್ಲ ಎನ್ನುವುದಕ್ಕಿಂತ ತಂಡದ ಗೆಲುವು ಮುಖ್ಯ. ನನಗೆ ಅವಕಾಶ ಸಿಕ್ಕಾಗ ನಾನು ಶ್ರೇಷ್ಠ ಪ್ರದರ್ಶನ ನೀಡುತ್ತೇನೆ' ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸಿಎಸ್​ಕೆ ತಂಡದಲ್ಲಿ ತಾಹೀರ್​ಗೆ ಅವಕಾಶ ಕಷ್ಟಸಾಧ್ಯವಾಗಿದೆ. ಏಕೆಂದರೆ, ಆರಂಭಿಕರಾದ ಪ್ಲೆಸಿಸ್​ ಹಾಗೂ ವಾಟ್ಸನ್​ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಇನ್ನು ಆಲ್​ರೌಂಡರ್​ಗಳಾದ ಸ್ಯಾಮ್ ಕರ್ರನ್ ಹಾಗೂ ಆಲ್​ರೌಂಡರ್ ಡ್ವೇನ್ ಬ್ರಾವೋ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ತಾಹೀರ್ ಇನ್ನಷ್ಟು ದಿನ ಕಾಯಬೇಕಿದೆ.

ABOUT THE AUTHOR

...view details