ಯಾರ್ಕ್‌ಷೈರ್:ಭಾರತದಲ್ಲಿ ನಡೆಯಲಿರುವ 2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ 15 ಸದಸ್ಯರ ತಂಡ ಪ್ರವೇಶಿಸಲು ಪ್ರಯತ್ನಿಸುತ್ತೇನೆ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.
ಮಂಗಳವಾರ ಸೌತಾಂಪ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯ ಮುಕ್ತಾಯವಾದ 2 ದಿನಗಳಲ್ಲೇ ರೂಟ್, ಯಾರ್ಕ್ಷೈರ್ಗೆ ಮರಳಿದ್ದಾರೆ. 29 ವರ್ಷದ ರೂಟ್ ಯಾರ್ಕ್‌ಷೈರ್ ಪರ ಟಿ-20 ಪಂದ್ಯವನ್ನು ಆಡಲು ಸಜ್ಜಾಗಿದ್ದರು. ಆದರೆ, ಗುರುವಾರ ನಾಟಿಂಗ್ಹ್ಯಾಮ್ಶೈರ್ ಜೊತೆಗಿನ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ.
ನನಗೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಆಸೆ ಇದೆ. ಅದನ್ನು ಬಿಟ್ಟು ಕೊಡುವುದಿಲ್ಲ. ಆದರೆ ಈ ಸಮಯದಲ್ಲಿ ನಾನು ಎಲ್ಲಿದ್ದೇನೆಂಬುದರ ಬಗ್ಗೆಯೂ ನನಗೆ ತಿಳಿದಿದೆ. ಇಂಗ್ಲೆಂಡ್ ತಂಡಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ನಾನು ಅತ್ಯುತ್ತಮ 11 ಆಟಗಾರರು ಅಥವಾ 15 ಆಟಗಾರರ ತಂಡದಲ್ಲಿ ಇರದೇ ಇದ್ದರೂ ಸರಿ. ನಾವು ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಬೇಕು ಮತ್ತು ಗೆಲುವು ಸಾಧಿಸಬೇಕು ಎಂದಿದ್ದಾರೆ.
ಟೂರ್ನಿಗೆ ಆಯ್ಕೆಯಾಗುವುದು ಎಷ್ಟು ಕಠಿಣವೆಂದು ನನಗೆ ತಿಳಿದಿದೆ. ನನಗಿಂತ ಉತ್ತಮ ಆಯ್ಕೆಗಳಿದ್ದರೆ ಅದು ಅಂತಾರಾಷ್ಟ್ರೀಯ ಕ್ರೀಡೆಯ ಭಾಗವಾಗಿದೆ. ಅದರ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ ಇರುವ ಸೀಮಿತ ಅವಕಾಶಗಳಲ್ಲಿ ಸಾಧ್ಯವಾದಷ್ಟು ಶ್ರಮ ವಹಿಸುತ್ತೇನೆ ಎಂದು ರೂಟ್ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.